ವಿವೇಕಾನಂದ ಕಾಲೇಜಿನಲ್ಲಿ ಯಕ್ಷಗಾನ ಕುರಿತ ರಾಷ್ಟಿçÃಯ ವಿಚಾರ ಸಂಕಿರಣ;

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು
ಹಾಗೂ ಅನೇಕ ಸಂಘಟನೆಗಳು ಯಕ್ಷಗಾನ ಕಲೆಗೆ
ಪ್ರೋತ್ಸಾಹ ನೀಡುತ್ತಾ ಬಂದಿದೆ. ವಿಚಾರ ಗೋಷ್ಠಿಗಳು ಹಲವೆಡೆ
ನಡೆಯುತ್ತಿದೆ. ಯಕ್ಷಗಾನಕ್ಕೆ ಸಲ್ಲದ ಬದಲಾವಣೆಗಳನ್ನು
ಗುರುತಿಸಿ ವಿಚಾರ ಮಾಡಲು ಇದು ಪ್ರಮುಖ ಪಾತ್ರ ವಹಿಸುತ್ತಿದೆ.
ಯಕ್ಷಗಾನ ಇಂದು ಜಗದಗಲ ತನ್ನ ವ್ಯಾಪ್ತಿಯನ್ನು
ವಿಸ್ತರಿಸಿಕೊಳ್ಳುತ್ತಿದೆ. ಯಕ್ಷಗಾನದ ಸ್ವರೂಪವನ್ನು
ಕಾಪಿಟ್ಟುಕೊಂಡು ಅಗತ್ಯ ಮಾರ್ಪಾಡುಗಳನ್ನು
ಮಾಡಿಕೊಳ್ಳಬೇಕಾಗುತ್ತದೆ. ಆಗ ಗಣ್ಯರ ಹಾಗೂ ವಿದ್ವಾಂಸರ
ಅಭಿಪ್ರಾಯ ಅತ್ಯಗತ್ಯ &quoಣ; ಎಂದು ವಿವೇಕಾನಂದ ಮಹಾವಿದ್ಯಾಲಯದ
ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ
ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸುವರ್ಣ ಮಹೋತ್ಸವ
ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾಲಯದ
ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಅಧ್ಯಯನ ಕೇಂದ್ರ,
ದೇರಾಜೆ ಸೀತಾರಾಮಯ್ಯ ಅಧ್ಯಯನ ಕೇಂದ್ರ, ಯಕ್ಷರಂಜಿನಿ
ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ಯಕ್ಷಗಾನದ
ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅಧ್ಯಕ್ಷೀಯ
ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ
ಮುರಳಿ ಕೃಷ್ಣ ಕೆ.ಎನ್ ಮಾತನಾಡಿ &quoಣ; ಕನ್ನಡ ಸಾಹಿತ್ಯಕ್ಕೆ
ಯಕ್ಷಗಾನ ಪ್ರಸಂಗಗಳ ಕೊಡುಗೆಯೂ
ಗಮನಾರ್ಹವಾದುದು.ಅವುಗಳ ಆಳವನ್ನು ಅಧ್ಯಯನ
ಮಾಡಿಕೊಂಡು ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾಗಿದೆ&quoಣ; ಎಂದು
ತಿಳಿಸಿದರು.

ಮoಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ
ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ
ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಯಕ್ಷಗಾನ ಅಕಾಡೆಮಿಯ
ಮಾಜಿ ಅಧ್ಯಕ್ಷ ಡಾ.ಎಂ.ಎಲ್ ಸಾಮಗ, ನಿವೃತ್ತ ಪ್ರಾಂಶುಪಾಲ ವಿದ್ವಾಂಸ
ಡಾ.ಪಾದೆಕಲ್ಲು ವಿಷ್ಣು ಭಟ್, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ
ಪ್ರತಿಷ್ಠಾನ ಉಜಿರೆಯ ಸಂಚಾಲಕ ತಾಳಮದ್ದಳೆಯ ಖ್ಯಾತ
ಅರ್ಥಧಾರಿ ಉಜಿರೆ ಅಶೋಕ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ‘ಯಕ್ಷರಂಜಿನಿ’ಯ ವಿದ್ಯಾರ್ಥಿಗಳಿಂದ
ಯಕ್ಷಗಾನ ಗಾನ ವೈಭವ ಜರುಗಿತು.
ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ
ಮನಮೋಹನ ಎಂ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ
ಮುಖ್ಯಸ್ಥೆ ಭವ್ಯಾ ಪಿ.ಆರ್ ನಿಡ್ಪಳ್ಳಿ ವಂದಿಸಿದರು.
ತೃತೀಯ ಕಲಾ ವಿಭಾಗ ವಿದ್ಯಾರ್ಥಿನಿ ಶ್ರೇಯಾ ಆಚಾರ್ಯ, ಭೂಮಿಕಾ ಜಿ
ಆಚಾರ್ಯ ನಿರೂಪಿಸಿದರು.
ಬಾಕ್ಸ್
ಪ್ರೊ.ಎಂ.ಎಲ್ ಸಾಮಗ ಅವರು ‘ಯಕ್ಷಗಾನ ಪ್ರಸಂಗಗಳ
ಸ್ವರೂಪ ಮತ್ತು ಕಾವ್ಯಾಂಶ’, ಡಾ ಪಾದೆಕಲ್ಲು ವಿಷ್ಣು ಭಟ್ಟ ಇವರು
‘ಯಕ್ಷಗಾನ ಪ್ರಸಂಗ ಸಾಹಿತ್ಯ ಬೆಳೆದು ಬಂದ ಬಗೆ’ ಹಾಗೂ ಉಜಿರೆ
ಅಶೋಕ್ ಭಟ್ ‘ಯಕ್ಷಗಾನ ಪ್ರಸಂಗಗಳ ಅರ್ಥ ವಿಸ್ತರಣೆ’
ವಿಚಾರದ ಕುರಿತು ಉಪನ್ಯಾಸ ನೀಡಿದರು