News & Updates

ಡ್ರಗ್ಸ್ ಮಾಫಿಯಾಗಳು ಯುವಜನರನ್ನು ತನ್ನತ್ತಸೆಳೆಯುತ್ತಿದೆ- ಡಾ. ಸುಲೇಖಾ ವರದರಾಜ್;

ಪುತ್ತೂರು : &#೩೯;ಪ್ರಸ್ತುತ ದಿನಗಳಲ್ಲಿ ಮಕ್ಕಳು ಮತ್ತು
ಯುವಜನರು ಹೆಚ್ಚಾಗಿ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಕೆಲವೊಮ್ಮೆ
ಮಾದಕ ವ್ಯಸನಗಳು ಅನುವಂಶಿಕವಾಗಿ ಬರುವ ಸಾಧ್ಯತೆಯೂ ಇದೆ.
ಸಾಮಾಜಿಕ ಜಾಲತಾಣಗಳು ಸಹ ಇತ್ತೀಚಿಗೆ ಇಂತಹ ವ್ಯಸನಕ್ಕೆ ಮಕ್ಕಳನ್ನು
ಹೆಚ್ಚಾಗಿ ಗುರಿಯಾಗಿಸುತ್ತಿದೆ. ನಾವು ಇದಕ್ಕೆ ನಮ್ಮತನವನ್ನು ಬಿಟ್ಟು
ಕೊಡದೆ ಪ್ರತಿರೋಧ ಒಡ್ಡಬೇಕು. ಹಾಗೆ ಆಧ್ಯಾತ್ಮಿಕವಾಗಿ
ಬೆರೆಯುವುದರಿಂದ ಮಾದಕ ವ್ಯಸನವನ್ನು ಹಿಡಿತಕ್ಕೆ ತರಬಹುದು &quoಣ; ಎಂದು
ಮಕ್ಕಳ ಮನೋ ತಜ್ಞೆ ಡಾ. ಸುಲೇಖಾ ವರದರಾಜ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
(ಸ್ವಾಯತ್ತ)ಪುತ್ತೂರು ಇದರ ಎನ್ಎಸ್ಎಸ್, ಎನ್ ಸಿಸಿ, ರೋವರ್ ಮತ್ತು
ರೆಂಜರ್ಸ್, ರೆಡ್ ಕ್ರಾಸ್ ಘಟಕ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ
&#೩೯; ಮಾದಕ ವಸ್ತು ವ್ಯಸನ ವಿರೋಧಿ ಜಾಗೃತಿ &#೩೯; ಎಂಬ ಕಾರ್ಯಕ್ರಮದಲ್ಲಿ
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಶ್ರೀಧರ್ ನಾಯ್ಕ್
&quoಣ; ಯುವಜನತೆ ಮಾದಕ ವ್ಯಸನಗಳಿಗೆ ತುತ್ತಾಗುತ್ತಿದ್ದು ಇದರಿಂದ
ಋಣಾತ್ಮಕ ಚಟುವಟಿಕೆಗಳು ಸಮಾಜದಲ್ಲಿ ಹೆಚ್ಚುತ್ತಿದೆ. ಇವನ್ನೆಲ್ಲ
ತಡೆಗಟ್ಟಲು ಮೊದಲು ನಮ್ಮ ಸಂಸ್ಕೃತಿಯನ್ನು ತಿಳಿದುಕೊಂಡು ನಮ್ಮ
ದೇಶದ ಭದ್ರ ಬುನಾದಿಗೆ ಯುವ ಜನತೆ ಕೊಡುಗೆ ನೀಡಬೇಕಿದೆ &quoಣ; ಎಂದು
ಹೇಳಿದರು.
ಕಾರ್ಯಕ್ರಮವನ್ನು ಎನ್ಎಸ್ಎಸ್ ಸ್ವಯಂ ಸೇವಕಿಯರಾದ ಗ್ರೀಷ್ಮ
ಪ್ರಾರ್ಥಿಸಿ, ಕೆ. ಕೃತಿಕಾ ಸ್ವಾಗತಿಸಿ, ಯಕ್ಷಿತಾ ವಂದಿಸಿ, ಚೈತನ್ಯ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…