News & Updates

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ. ಶ್ರೀಪತಿ ಕಲ್ಲೂರಾಯ;

ಪುತ್ತೂರು, ಮೇ 16: ಮಕ್ಕಳ ಭವಿಷ್ಯದ ಚಿಂತೆ ಎಲ್ಲರಿಗೂ ಇರುತ್ತದೆ.
ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮತ್ತು ರಕ್ಷಕರ ಪಾತ್ರ
ಮಹತ್ವದ್ದು. ಅವರನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸವನ್ನು
ಇಬ್ಬರು ಸೇರಿಯೇ ಮಾಡಬೇಕು. ಸೈಕಲ್ ತುಳಿಯುವಾಗ ಒಂದು
ಚಕ್ರದಲ್ಲಿ ಗಾಳಿ ಇದ್ದು ಇನ್ನೊಂದರಲ್ಲಿಲ್ಲ ಎಂದರೆ ಸೈಕಲ್ ಸವಾರಿ ಮಾಡಲು
ಯೋಗ್ಯವಾಗಿರುವುದಿಲ್ಲ. ಮಕ್ಕಳ ವಿಷಯದಲ್ಲೂ ಅಷ್ಟೆ ಶಿಕ್ಷಕರು
ಮತ್ತು ರಕ್ಷಕರು ಎರಡು ಚಕ್ರಗಳಂತೆ ಕಾರ್ಯನಿರ್ವಹಿಸಬೇಕು
ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ
ಕಲ್ಲೂರಾಯ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಮತ್ತು ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ ಆಯೋಜಿಸಿದ್ದ ರಕ್ಷಕ ಶಿಕ್ಷಕ
ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ
ಮುರಳಿಕೃಷ್ಣ ಕೆ. ಎನ್, ಮಕ್ಕಳನ್ನು ಕಾಲೇಜಿಗೆ ಸೇರಿಸಿದ ಕೂಡಲೇ
ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಅವರ ಬೆಳವಣಿಗೆ, ವರ್ತನೆ,
ಓದುವಿಕೆಗಳ ಬಗ್ಗೆ ಪೋಷಕರು ವಿಚಾರಿಸುತ್ತಿರಬೇಕು. ನಮ್ಮ ಸಂಸ್ಥೆ
ಪ್ರಾರAಭದಿAದಲೂ ಕೆಲವು ಮೂಲ ತತ್ವಗಳನ್ನು ಅನುಸರಿಸಿಕೊಂಡು
ಬAದಿದೆ. ಅದನ್ನು ಉಳಿಸುವ ಕೆಲಸವನ್ನು ನಾವು ಮುಂದುವರಿಸಿದ್ದೇವೆ ಕೂಡ
ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಐಕ್ಯುಎಸಿ
ಸಂಯೋಜಕಿ ಡಾ. ರವಿಕಲಾ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ
ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್, ರಕ್ಷಕ ಶಿಕ್ಷಕ
ಸಂಘದ ಕಾರ್ಯದರ್ಶಿ, ಕಾಲೇಜಿನ ವಿಶೇಷಾಧಿಕಾರಿ ಶ್ರೀಧರ ನಾಯ್ಕ್,
ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರ‍್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿ,
ಡಾ. ರವಿಕಲಾ ವಂದಿಸಿದರು. ಡಾ. ವಿದ್ಯಾ ಎಸ್. ನಿರೂಪಿಸಿದರು.

Related News

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿಹಾದಿಯಲ್ಲಿರುತ್ತೆ: ಪ್ರೊ.ಬಿ. ವೆಂಕಟರಾಜ;

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿಹಾದಿಯಲ್ಲಿರುತ್ತೆ:…

ಪುತ್ತೂರು, ಮೇ 22: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂಶೋಧನೆಯಗುಣ…

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆಭಾಷಾಶಿಕ್ಷಕರ ಜವಾಬ್ದಾರಿ ಹಿರಿದು: ಡಾ. ಪಂಕಜ್ ದ್ವಿವೇದಿ;

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆಭಾಷಾಶಿಕ್ಷಕರ…

ಪುತ್ತೂರು ಮೇ.19: ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಲವಾರುಚಟುವಟಿಕೆಗಳನ್ನು…

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ. ಶ್ರೀಪತಿ ಕಲ್ಲೂರಾಯ;

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ.…

ಪುತ್ತೂರು, ಮೇ 16: ಮಕ್ಕಳ ಭವಿಷ್ಯದ ಚಿಂತೆ…