News & Updates

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ವಿಚಾರ ಗೋಷ್ಟಿ ಉದ್ಘಾಟನೆ;

ಪುತ್ತೂರು; ;ನಾವು ಸಮಾಜದ ಒಳಿತನ್ನು
ಕಾಪಾಡುವವರಾಗಬೇಕು. ಆದರೆ ಯುದ್ಧ ಎನ್ನುವುದು ನಮ್ಮ
ಸಾಮಾಜಿಕ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಸಾಹಿತ್ಯಕ
ಜ್ಞಾನವನ್ನು ಪಡೆದು ಸಂಘರ್ಷತ್ಮಾಕ ಮನಸ್ಥಿತಿಯಿಂದ
ದೂರವಿರಬೇಕು. ಸಮಾಜದ ಕುರಿತಾದ ಅಧ್ಯಯನಕ್ಕೆ
ಇತಿಮಿತಿಗಳಿಲ್ಲ. ನಾವು ಈ ಅಧ್ಯಯನದಲ್ಲಿ ತೊಡಗಿಸಿಕೊಂಡು
ಏಕತೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕು.&quoಣ;
ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.
ಶ್ರೀಧರ್ ನಾಯ್ಕ್. ಬಿ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
(ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು ಇಲ್ಲಿ, ಮಾನವಿಕ ಸಂಘ
ಮತ್ತು ಐಕ್ಯೂಎಸಿ ಸಹಯೋಗದಲ್ಲಿ ನಡೆದ ‘ಯುದ್ಧ ಮತ್ತು
ಜೀವನ’ ಎಂಬ ವಿಷಯದ ಕುರಿತು ನಡೆದ ವಿದ್ಯಾರ್ಥಿ ವಿಚಾರ
ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ
ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ;
ಪ್ರಪಂಚ ಶಾಂತಿಯನ್ನು ಬಯಸುತ್ತದೆ. ಆದರೆ ಶಾಂತಿ ಏನು ಎಂದು
ತಿಳಿಯಬೇಕಾದರೆ ಸಂಘರ್ಷ ಎಂದರೆ ಏನು ಎಂಬುದನ್ನು
ಅರ್ಥೈಸಿಕೊಳ್ಳಬೇಕು.;ಎoದರು.
ಐಕ್ಯೂಎಸಿ ಘಟಕದ ಸಂಯೋಜಕಿ ಡಾ. ರವಿಕಲಾ ಕಾರ್ಯಕ್ರಮಕ್ಕೆ
ಶುಭ ಹಾರೈಸಿದರು.
ಈ ಸಂದರ್ಭದಲ್ಲಿ 18 ಜನ ವಿದ್ಯಾರ್ಥಿಗಳು ವಿಚಾರಗೋಷ್ಠಿ ಮಂಡಿಸಿದರು.
ವಿಚಾರಗೋಷ್ಟಿಯ ಸಮನ್ವಯಕಾರರಾಗಿ ಡಾ.ಶ್ರೀಪತಿ
ಕಲ್ಲೂರಾಯ ಸಹಕರಿಸಿದರು.
ಕಾರ್ಯಕ್ರಮವನ್ನು ಕಲಾ ವಿಭಾಗದ ಡೀನ್, ಆಂಗ್ಲ ವಿಭಾಗದ
ಮುಖ್ಯಸ್ಥ ಬಾಲಕೃಷ್ಣ ಹೊಸಮನೆ ಸ್ವಾಗತಿಸಿ, ಹಿಂದಿ ವಿಭಾಗ
ಮುಖ್ಯಸ್ಥೆ ಡಾ. ದುರ್ಗಾರತ್ನ.ಸಿ ವಂದಿಸಿ, ತೃತೀಯ ಕಲಾ ವಿಭಾಗದ
ವಿದ್ಯಾರ್ಥಿನಿ ಅನನ್ಯ ಸುಬ್ರಮಣ್ಯ ನಿರೂಪಿಸಿದರು. ಸಮಾಜಶಾಸ್ತ್ರ ವಿಭಾಗದ
ಮುಖ್ಯಸ್ಥೆ ಡಾ.ವಿದ್ಯಾ ಎಸ್ ಸಹಕರಿಸಿದರು.

Related News

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ. ವೆಂಕಟೇಶ ಮಂಜುಳಗಿರಿ;

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ.…

ಪುತ್ತೂರು, ಸೆಪ್ಟೆಂಬರ್ 11: ವಿವೇಕದ ಜೊತೆಗೆ ಆನಂದ…

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ ಭಾಷೆಗಳಿಂದ ಮಾತ್ರ ಸಾಧ್ಯ- ಬಾಲಕೃಷ್ಣ ಹೆಚ್;

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ…

ಪುತ್ತೂರು : ಭಾಷೆ ಸಂಸ್ಕೃತಿಯನ್ನು ಪಸರಿಸುತ್ತದೆ. ಹಿಂದಿ…