News & Updates

ವಿವೇಕಾನಂದ ಕಾಲೇಜಿನಲ್ಲಿ ಶಿವರಾಮ ಕಾರಂತ ಕುರಿತ ವಿಶೇಷ ಉಪನ್ಯಾಸ.

ಕಾರಂತರು ಅಪ್ಪಟ ಪರಿಸರ ಪ್ರೇಮಿ-ಡಾ.ನರೇಂದ್ರ ರೈ ದೇರ್ಲ
ಪುತ್ತೂರು, ಅ.23: ಶಿವರಾಮ ಕಾರಂತರು ತಮ್ಮ ಬಹುಮುಖ
ಪ್ರತಿಭೆಯಿಂದ ಕನ್ನಡ ಸಾಹಿತ್ಯ ಲೋಕವನ್ನು
ಶ್ರೀಮಂತಗೊಳಿಸಿದವರು. ಅಂತೆಯೇ ಪರಿಸರದ ಬಗೆಗೆ ಅತೀವ
ಕಾಳಜಿಯುಳ್ಳವರಾಗಿದ್ದವರು. ನಾವು ಬದುಕುವ ಪರಿಸರ, ನಾವು
ಉಸಿರಾಡುವ ಗಾಳಿ, ಸೇವಿಸುವ ಆಹಾರ, ಕುಡಿಯುವ ನೀರು ಇವೆಲ್ಲದರ
ಪ್ರಾಮುಖ್ಯತೆಯನ್ನು ಎಲ್ಲರಿಗೂ ತಿಳಿಸಿಕೊಟ್ಟು ಕನ್ನಡ ಸಾಹಿತ್ಯದ
ಮುಖೇನ ಜಾಗೃತಿ ಮೂಡಿಸಿದವರು ಶಿವರಾಮ ಕಾರಂತರು.
ಕಾರಂತರು ತಾವು ಬದುಕಿದ ಹಾಗೆ ಬರೆದವರು, ಬರೆದ ಹಾಗೆ
ಬಾಳಿದವರು ಎಂದು ಸರ್ಕಾರಿ ಮಹಿಳಾ ದರ್ಜೆ ಕಾಲೇಜು ಪುತ್ತೂರು
ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ
ಹೇಳಿದರು.
ಇವರು ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ವಿವೇಕಾನಂದ
ಸಂಶೋಧನಾ ಕೇಂದ್ರ ಮತ್ತು ಐ.ಕ್ಯೂ.ಎ.ಸಿ, ಶಿವರಾಮ ಕಾರಂತ
ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಶಿವರಾಮ
ಕಾರಂತರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ
ಅತಿಥಿಗಳಾಗಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ
ಅಧ್ಯಕ್ಷೀಯ ಮಾತುಗಳನ್ನಾಡಿ, ಕಾರಂತರಂತವರ
ಪುಸ್ತಕಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ
ಪಾತ್ರವಹಿಸುತ್ತದೆ. ಹಿಂದಿನ ಕಾಲದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ
ಅನೇಕ ಸಾಧನೆಯನ್ನು ಮಾಡಿದ ಮಹಾನ್ ಸಾಧಕರಿದ್ದು, ಅಂತಹ
ಸಾಧಕರಲ್ಲಿ ಶಿವರಾಮ ಕಾರಂತರು ಕೂಡ ಒಬ್ಬರು. ಕಾರಂತರು
ಓರ್ವ ವಾಸ್ತವವಾದಿ ಎಂದರೆ ತಪ್ಪಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ
ಕೃಷ್ಣ ಕೆ. ಎನ್, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ
ಅಧ್ಯಯನ ಕೇಂದ್ರದ ನಿರ್ದೇಶಕ ಮತ್ತು ಪರೀಕ್ಷಾಂಗ ಕುಲ
ಸಚಿವ ಡಾ. ಎಚ್. ಜಿ. ಶ್ರೀಧರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾ ಕೇಂದ್ರದ
ನಿರ್ದೇಶಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಶಿವರಾಮ ಅಧ್ಯಯನ
ಕೇಂದ್ರದ ಸಂಯೋಜಕ ಮತ್ತು ಉಪನ್ಯಾಸಕ ಡಾ. ಪ್ರಮೋದ್
ಎಂ.ಜಿ ವಂದಿಸಿ, ಕೃತಿ.ಪಿ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಫುಡ್ ಕಾರ್ನಿವಲ್ ೨೦೨೪ ಉದ್ಘಾಟನೆ.

ವಿವೇಕಾನಂದ ಕಾಲೇಜಿನಲ್ಲಿ ಫುಡ್ ಕಾರ್ನಿವಲ್ ೨೦೨೪…

ಪುತ್ತೂರು: ಕಾಲೇಜು ದಿನಗಳಲ್ಲೇ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವುದು…

ರಾಷ್ಟ್ರ ಮಟ್ಟದ ಶಿಬಿರದಲ್ಲಿ ವಿವೇಕಾನಂದ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳ ಸಾಧನೆ.

ರಾಷ್ಟ್ರ ಮಟ್ಟದ ಶಿಬಿರದಲ್ಲಿ ವಿವೇಕಾನಂದ ಕಾಲೇಜಿನ…

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು…

ಆರ್ಕಿಡ್ ಸಸ್ಯಗಳು ಪರಿಸರದ ಆರೋಗ್ಯವನ್ನುಸೂಚಿಸುತ್ತದೆ : ಪಾಂಡೀರ ಕೌಶಿಕ್ ಕಾವೇರಪ್ಪ.

ಆರ್ಕಿಡ್ ಸಸ್ಯಗಳು ಪರಿಸರದ ಆರೋಗ್ಯವನ್ನುಸೂಚಿಸುತ್ತದೆ :…

ಪುತ್ತೂರು: ಭಾರತದಲ್ಲಿ ಆರ್ಕಿಡ್ ಗಳು ವಿಶಿಷ್ಟ ಸ್ಥಾನವನ್ನುಹೊಂದಿದೆ.…