News & Updates

ವಿವೇಕಾನಂದ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ;

ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿ ಜೀವನ ಸಕಾಲ-

ಪ್ರಕಾಶ್ ಮೂಡಿತ್ತಾಯ

ಪುತ್ತೂರು, ಮೇ 3:&quoಣ; ಯಶಸ್ವಿಯಾಗಿ ಶಿಕ್ಷಣ ಪೂರೈಸಿದ
ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಸ್ವಾಗತಿಸುವುದು
ಒಂದು ಭಾವನಾತ್ಮಕ ಕ್ಷಣ. ವಿದ್ಯಾರ್ಥಿಗಳು ಸಾಧ್ಯವಾದಷ್ಟು ಉನ್ನತ
ಶಿಕ್ಷಣವನ್ನು ಪಡೆಯಬೇಕು. ನಾವು ಭಾವನೆಗಳನ್ನು ನಿಯಂತ್ರಿಸಿ
ಜೀವನೋತ್ಸಾಹದಿAದ ಬದುಕಬೇಕು ಹೊರತು ನಿಸ್ತೇಜರಾಗಿ ಅಲ್ಲ.
ನಾವು ಪಡೆದ ಉದ್ಯೋಗದಲ್ಲಿ ಕ್ರಿಯಾಶೀಲರಾಗಿ ಉತ್ಕೃಷ್ಟ
ತೆಯನ್ನು ತೋರಬೇಕು. ಜೀವನವನ್ನು ಒಳ್ಳೆಯ ರೀತಿಯಲ್ಲಿ
ರೂಪಿಸಿಕೊಳ್ಳಲು ವಿದ್ಯಾರ್ಥಿ ಜೀವನ ಸಕಾಲ &quoಣ; ಎಂದು ಕಾಲೇಜಿನ ಹಿರಿಯ
ವಿದ್ಯಾರ್ಥಿ, ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ
ಪ್ರಕಾಶ್ ಮೂಡಿತ್ತಾಯ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು
ಇಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿಯ ಸಹಯೋಗದಲ್ಲಿ
ನಡೆದ ಅಂತಿಮ ಪದವಿ ಹಾಗೂ ಸ್ನಾತಕೋತ್ತರ ಪದವಿ
ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಹಿರಿಯ ವಿದ್ಯಾರ್ಥಿ
ಸಂಘದ ದಿನಾಚರಣೆ ಕಾರ್ಯಕ್ರಮದಲ್ಲಿ
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ
ಪ್ರಭಾಕರ ಭಟ್ &quoಣ; ಒಳ್ಳೆಯ ಚಿಂತನೆಯನ್ನಿಟ್ಟುಕೊAಡು ಬದುಕು
ಸಾಗಿಸುವುದು ಮುಖ್ಯವಾಗಿದೆ. ಸುವಿಚಾರಗಳೆಂಬ ತೈಲದಿಂದ
ಬೆಳಗುವ ಬತ್ತಿಯಂತೆ ನಾವು ಇರಬೇಕು &quoಣ; ಎಂದು ಆಶಿಸಿದರು.
ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಪಿ.ಕೆ ಬಾಲಕೃಷ್ಣ
ಅವರು ಮಾತನಾಡಿ &quoಣ; ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಇರುವ
ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು.
ಸಾಮಾಜಿಕ ಜಾಲತಾಣಗಳನ್ನು ಹಾಗೂ ಆಧುನಿಕ

ತಂತ್ರಜ್ಞಾನವನ್ನು ದುರುಪಯೋಗ ಮಾಡದೇ ಒಳ್ಳೆಯ
ರೀತಿಯಲ್ಲಿ ಬಳಸಿಕೊಳ್ಳಬೇಕು &quoಣ; ಎಂದರು.
ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ
ಡಾ.ಪಿ.ಕೆ ಬಾಲಕೃಷ್ಣ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಪತ್ರಕರ್ತ ಹಾಗೂ
ಸಾಹಿತಿ ಗೋಪಾಲಕೃಷ್ಣ ಕುಂಟಿನಿ, ವಿಶ್ರಾಂತ ಕಛೇರಿ ಅಧೀಕ್ಷಕಿ ಸಾವಿತ್ರಿ
ಎನ್.ಎಚ್, ವಿಶ್ರಾಂತ ಪ್ರಥಮ ದರ್ಜೆ ಸಹಾಯಕ ಅನಂತ ಪದ್ಮನಾಭ
ಪ್ರಭು ಅವರನ್ನು ಗೌರವಿಸಲಾಯಿತು.
ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ವಿಶ್ವವಿದ್ಯಾಲಯ
ಮಟ್ಟದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ ನೀಡಿ ಹಿರಿಯ
ವಿದ್ಯಾರ್ಥಿ ಸಂಘಕ್ಕೆ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜು ಹಿರಿಯ ವಿದ್ಯಾರ್ಥಿ
ಸಂಘದ ಅಧ್ಯಕ್ಷ ಸತೀಶ್ ರಾವ್.ಪಿ, ಕೋಶಾಧಿಕಾರಿ ವಾಮನ ಪೈ,
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ
ಕಲ್ಲೂರಾಯ, ಸಂಚಾಲಕ ಮುರಳಿ ಕೃಷ್ಣ ಕೆ.ಎನ್
ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಉಪಪ್ರಾಂಶುಪಾಲ ಪ್ರೊ.
ಶಿವಪ್ರಸಾದ್ ಕೆ.ಎಸ್ ಸ್ವಾಗತಿಸಿ ಐಕ್ಯೂಎಸಿ ಸಂಯೋಜಕಿ ಹಾಗೂ ವಾಣಿಜ್ಯ
ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ವಂದಿಸಿದರು. ಕನ್ನಡ ವಿಭಾಗದ
ಮುಖ್ಯಸ್ಥ ಡಾ. ಮನಮೋಹನ ಎಂ ಹಾಗೂ ಸ್ನಾತಕೋತ್ತರ
ವಿಭಾಗದ ವಿದ್ಯಾರ್ಥಿನಿ ಅನನ್ಯ ಅಡಿಗ ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಕಲಾಸಪ್ತ-2025;

ವಿವೇಕಾನಂದ ಕಾಲೇಜಿನಲ್ಲಿ ಕಲಾಸಪ್ತ-2025;

ವಿದ್ಯಾರ್ಥಿಗಳು ಕೌಶಲ್ಯಗಳನ್ನು ಬೆಳೆಸಿಕೊಳ್ಳಿಪುತ್ತೂರು: ಸಾಮಾಜಿಕ ಜಾಲತಾಣಗಳು ಜನರ…

ತಂತ್ರಜ್ಞಾನ ಬೆಳೆದಂತೆ ಉದ್ಯಮವೂ ಬೆಳೆಯುತ್ತದೆ: ಡಾ. ಬಾಲಸುಬ್ರಮಣ್ಯಂ;

ತಂತ್ರಜ್ಞಾನ ಬೆಳೆದಂತೆ ಉದ್ಯಮವೂ ಬೆಳೆಯುತ್ತದೆ: ಡಾ.…

ಪುತ್ತೂರು ಏ.8: ನಮ್ಮ ಹಿರಿಯರು ಕೈಯಲ್ಲೇ ಭೂಮಿ…

ಉದ್ಯೋಗ ಆಕಾಂಕ್ಷಿಗಳಿಗೆ ಅಗತ್ಯ ರೆಸ್ಯೂಮ್: ಶ್ವೇತಾ ಜೆ ರಾವ್;

ಉದ್ಯೋಗ ಆಕಾಂಕ್ಷಿಗಳಿಗೆ ಅಗತ್ಯ ರೆಸ್ಯೂಮ್: ಶ್ವೇತಾ…

ಪುತ್ತೂರು ಮೇ.7: ಕೆಲಸವನ್ನು ಹುಡುಕುವ ಅಭ್ಯರ್ಥಿಗಳಲ್ಲಿಇರಬೇಕಾದ ಮೂಲಭೂತ…