News & Updates

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು 43 ನೇ ವರ್ಷದ ಗಣೇಶೋತ್ಸವ ಆಚರಣೆ.

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ
ಪುತ್ತೂರು(ರಿ) ಇದರ ಆಶ್ರಯದಲ್ಲಿ ನೆಹರೂನಗರದ
ವಿವೇಕಾನಂದ ವಿದ್ಯಾಲಯಗಳ ಆವರಣದ ಕೇಶವ ಸಂಕಲ್ಪ
ಸಭಾoಗಣದಲ್ಲಿ 43 ನೇ ವರ್ಷದ ಗಣೇಶೋತ್ಸವ ದಿನಾಂಕ 7-
9-2024 ರಿಂದ 9-9-2024 ರವರೆಗೆ ನಡೆಯಲಿದೆ ಎಂದು
ವಿವೇಕಾನoದ ವಿದ್ಯಾವರ್ಧಕ ಸಂಘದ ಕರ‍್ಯದರ್ಶಿ ಡಾ.ಕೆ.ಎಂ
ಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಧ್ಯೇಯದೊಂದಿಗೆ:
ಪ್ರತಿ ವರ್ಷವೂ ವಿಶೇಷ ಧ್ಯೇಯದೊಂದಿಗೆ
ಗಣೇಶೋತ್ಸವವನ್ನು ಆಚರಿಸುತ್ತಿರುವ ಈ ಸಂಸ್ಥೆಯೂ
ಈ ಬಾರಿ ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ
ಸಮಾಜಮುಖಿ ವಿಚಾರವನ್ನಿಟ್ಟುಕೊಂಡು ಹಬ್ಬವನ್ನು
ಆಚರಿಸುತ್ತಿದೆ. ಆವರಣದಲ್ಲಿರುವ ಎಲ್ಲಾ ವಿದ್ಯಾಸಂಸ್ಥೆಗಳ
ಆಡಳಿತ ಮಂಡಳಿ, ಅಧ್ಯಾಪಕರು, ಸಿಬ್ಬಂದಿಗಳು, ಮತ್ತು
ವಿದ್ಯಾರ್ಥಿಗಳ ಒಗ್ಗೂಡುವಿಕೆಯಿಂದ ಈ ಕರ‍್ಯಕ್ರಮವನ್ನು
ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು ಈ ಬಾರಿ
ವಿಶೇಷವಾಗಿ ಕಬಕ, ಪಡ್ನೂರು, ಬನ್ನೂರು ಮತ್ತು

ಕೊಡಿಪ್ಪಾಡಿ ಗ್ರಾಮಗಳ ಭಕ್ತಾದಿಗಳೂ ಈ ಧಾರ್ಮಿಕ
ಹಾಗೂ ಸಾಂಸ್ಕೃತಿಕ ಕರ‍್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಿನಾಂಕ 7-9-2024 ರಿಂದ ತೊಡಗಿ ದಿನಾಂಕ 9-9-2024 ರ ವರೆಗೆ
ವಿದ್ಯಾರ್ಥಿಗಳಿಂದ ಹಾಗೂ ಸ್ಥಳಿಯರಿಂದ ಪ್ರತಿದಿನಾ ಭಜನೆ,
ಕೀರ್ತನೆ, ನೃತ್ಯ ವೈಭವ, ಯಕ್ಷಗಾನ ಹಾಗೂ
ಸಾಂಸ್ಕೃತಿಕ ವೈಭವ ನಡೆಯಲಿದೆ. ದಿನಾಂಕ 9-9-2024
ರಂದು ನಡೆಯುವ ಧಾರ್ಮಿಕ ಸಭಾ ಕರ‍್ಯಕ್ರಮದಲ್ಲಿ
ಡಾ.ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯನ್ನು
ವಹಿಸಲಿದ್ದು, ತಾಂತ್ರಿಕ ಮಹಾವಿದ್ಯಾಲಯ ವiಣಿಪಾಲದ ನಿವೃತ್ತ
ಪ್ರಾಧ್ಯಾಪಕರು, ಭೂ ವಿಜ್ಞಾನಿಗಳು ಆಗಿರುವ ಡಾ. ಎಚ್. ಎನ್
ಉದಯಶಂಕರ ಅವರು ಅಭ್ಯಾಗತರಾಗಿ
ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಗಣೇಶೋತ್ಸವ
ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿವಿಧ
ಸ್ಫರ್ಧೆಯ ವಿಜೇತರಿಗೆ ಬಹುಮಾನವನ್ನು
ವಿತರಿಸಲಾಗುವುದು.
ಮಧ್ಯಾಹ್ನ ಗಂಟೆ 2 ರಿಂದ ಸುಮಾರು ಎಂಟು ಸಾವಿರ
ವಿದ್ಯಾರ್ಥಿಗಳನ್ನೊಳಗೊಂಡ ಗಣೇಶ ವಿಗ್ರಹದ
ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯಲಿದೆ ಎಂದು
ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related News

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸಿದಂತೆ : ಡಾಧನಂಜಯ ಕುಂಬ್ಳೆ

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ…

ಪುತ್ತೂರು, ಸೆ12: ವಿವೇಕಾನಂದರು ಒಬ್ಬ ಉತ್ತಮ ಕವಿ,…

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ ಶ್ರೀಗಣೇಶೋತ್ಸವ.ಮಣ್ಣು ಸೃಷ್ಟಿಯ ಕೊಡುಗೆ: ಡಾ. ಎಚ್. ಎನ್.ಉದಯಶಂಕರ

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ…

ಪುತ್ತೂರು.ಸೆ, 9:ಸಂಶೋಧನೆ ಮತ್ತು ಕೈಗಾರಿಕೆಗಳಿಂದ ಉತ್ಪತ್ತಿ ಮಾಡಲಾಗದ…

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು 43 ನೇ ವರ್ಷದ ಗಣೇಶೋತ್ಸವ ಆಚರಣೆ.

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು…

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘಪುತ್ತೂರು(ರಿ) ಇದರ…