News & Updates

ವಿವೇಕಾನಂದ ಕಾಲೇಜಿನಲ್ಲಿ ತುಳುನೆಂಪು ಕಾರ್ಯಕ್ರಮ-05-08-2024

ಪುತ್ತೂರು,ಅ.೫: ಆಟಿ ಎಂದರೆ ಅದು ಬೇಸಾಯದ ತಿಂಗಳು. ಇಂದು ಗ್ರಾಮೀಣ
ಭಾಗದಿಂದ ಅಂತರಾಷ್ಟೀಯ ಮಟ್ಟದವರೆಗೂ ಆಟಿ ತಿಂಗಳ ಆಚರಣೆಗಳನ್ನು
ಆಚರಿಸುತ್ತ ಬರುತ್ತಿದ್ದಾರೆ. ತುಳುನಾಡಿನಲ್ಲಿ ತುಳುವರು ಆಟಿ ತಿಂಗಳಿನ
ಸಂದರ್ಭದಲ್ಲಿ ಯಾವುದೇ ಶುಭಕಾರ್ಯಕ್ರಮಗಳನ್ನು ಆಚರಿಸುವುದಿಲ್ಲ. ಆಟಿ
ಕೆಲೆಂಜ ಮನೆಮನೆಗೆ ಬರುತ್ತಾನೆ. ಈ ಮೂಲಕ ಊರಿಗೆ ಬಂದ ಮಾರಿ ಕಳೆಯುತ್ತಾನೆ
ಎಂಬುವುದು ಜನರ ನಂಬಿಕೆ ಎಂದು ವಕೀಲ ಹಾಗೂ ತುಳು ಸಾಹಿತ್ಯ ಅಕಾಡೆಮಿಯ
ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ)ಕಾಲೇಜಿನಲ್ಲಿ ತುಳು ಸಂಘ, ಪ್ರಾಚೀನ ವಸ್ತುಗಳ
ಪ್ರದರ್ಶನ ಕೇಂದ್ರ, ರೋವರ್ಸ್ ರೇಂಜರ್ಸ್ ಘಟಕ ಹಾಗೂ ಐಕ್ಯೂಎಸಿ ಘಟಕದ
ಸಹಯೋಗದಲ್ಲಿ ಆಯೋಜಿಸಲಾದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಭಾಗವಹಿಸಿ
ಮಾತನಾಡುತ್ತಾ,
ಆಟಿಯಲ್ಲಿ ವಿವಿಧ ತಿನಿಸು, ಖಾದ್ಯ ಗಳನ್ನು ಮಾಡಿ ತಿನ್ನುತ್ತಾರೆ. ಹಿಂದಿನ ಕಾಲದಲ್ಲಿ ಈ
ತಿಂಗಳ ಸಂಧರ್ಭದಲ್ಲಿ ಹಿರಿಯರು ಬಹಳ ಕಷ್ಟವನ್ನು ಅನುಭವಿಸುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೆ. ಮೊದಲಿದ್ದ ಕಷ್ಟ ಈಗ ಇಲ್ಲ. ವೈಜ್ಞಾನಿಕ
ತಂತ್ರಜ್ಞಾನದ ಕಾರಣದಿಂದಾಗಿ ನಾವು ಬದುಕುವ ಶೈಲಿಯು ಬದಲಾಗುತ್ತಾ ಸಾಗಿದೆ.
ಇಂದು ಹೊಲ ಗದ್ದೆಗಳು ಕಣ್ಮರೆಯಾಗುತ್ತಿದೆ. ಇದರಿಂದ ತುಳುನಾಡಿನ ಜನಜೀವನ
ಶೈಲಿ, ಆಚರಣಾ ಪದ್ಧತಿಗಳು ಇವೆಲ್ಲವೂ ಮೂಲೆಗೆ ಸೇರುತ್ತಿದೆ. ಇನ್ನಾದರೂ
ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಈ
ಸಂದರ್ಭದಲ್ಲಿ ಮಾತನಾಡುತ್ತಾ,
ಜುಲೈ ತಿಂಗಳಿನ ಕೊನೆಯಲ್ಲಿ ಆಟಿ ತಿಂಗಳು ಪ್ರಾರಂಭಗೊಳ್ಳುತ್ತದೆ. ಈ
ಸಮಯದಲ್ಲಿ ಕೃಷಿಕರು ಬೇಸಾಯದಲ್ಲಿ ತೊಡಗಿಕೊಂಡರೆ, ಸ್ವಾಮೀಜಿಗಳು
ಚಾತುರ್ಮಸ್ಯ ವೃತಗಳಲ್ಲಿ ತೊಡಗಿಕೊಳ್ಳುತ್ತಾರೆ. ಆಟಿ ತಿಂಗಳಿನಲ್ಲಿ ಕೇವಲ
ವೈವಿಧ್ಯಮಯವಾದ ತಿನಿಸುಗಳನ್ನು ತಿನ್ನುವುದು ಮಾತ್ರವಲ್ಲದೇ,
ತುಳುನಾಡಿನ ಆಚರಣೆಗಳ ಮಹತ್ವ ಹಾಗೂ ಸಾಂಪ್ರದಾಯಿಕ ಆಟಗಳು,
ಪಾಡ್ದಾನಗಳ ಬಗೆಗೂ ಕೂಡ ನಾವು ತಿಳಿದುಕೊಳ್ಳುಬೇಕು. ಇಂದು ನಮ್ಮ
ಕಾಲೇಜಿನಲ್ಲಿ ತುಳುಸಂಘವು ಒಂದು ಉತ್ತಮ ಕಾರ್ಯಕ್ರಮವನ್ನು
ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ತುಳುನಾಡು ಹಾಗೂ ಇಲ್ಲಿನ
ಆಚರಣೆಗಳನ್ನು ತಿಳಿಸುವ ಕಾರ್ಯ ಮಾಡಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಕಾಲೇಜಿನ
ವಿಶೇಷಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್
ಉಪಸ್ಥಿತರಿದ್ದರು.
ತುಳು ಸಂಘದ ಸಂಯೋಜಕಿ ಹಾಗೂ ವ್ಯವಹಾರ ನಿರ್ವಹಣೆ ವಿಭಾಗದ ಉಪನ್ಯಾಸಕಿ
ದೀಪಿಕಾ ಎಸ್ ಸ್ವಾಗತಿಸಿ , ತುಳು ಸಂಘದ ಅಧ್ಯಕ್ಷ ಆಶಿಶ್ ಆಳ್ವ ವಂದಿಸಿ, ತೃತೀಯ ಬಿಬಿಎ
ವಿಭಾಗದ ವಿದ್ಯಾರ್ಥಿನಿ ತನಿಷಾ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ತುಳುನೆಂಪು ಕಾರ್ಯಕ್ರಮ-05-08-2024

ವಿವೇಕಾನಂದ ಕಾಲೇಜಿನಲ್ಲಿ ತುಳುನೆಂಪು ಕಾರ್ಯಕ್ರಮ-05-08-2024

ಪುತ್ತೂರು,ಅ.೫: ಆಟಿ ಎಂದರೆ ಅದು ಬೇಸಾಯದ ತಿಂಗಳು.…

ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಷಾ ಕೌಶಲ್ಯವನ್ನುಬೆಳೆಸಿಕೊಳ್ಳಬೇಕು: ಭವ್ಯಾ ಪಿ.ಆರ್ ನಿಡ್ಪಳ್ಳಿ

ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಷಾ ಕೌಶಲ್ಯವನ್ನುಬೆಳೆಸಿಕೊಳ್ಳಬೇಕು: ಭವ್ಯಾ…

ಪುತ್ತೂರು.ಜು,30: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇಂದುವಿಫುಲವಾದ ಅವಕಾಶಗಳಿವೆ. ಆದರೆ…