News & Updates

ವಿವೇಕಾನಂದ ಕಾಲೇಜಿನಲ್ಲಿ ‘ಹನುಮಾನ್ ಚಾಲೀಸಾ ಪಠಣ ಸಪ್ತಾಹ’ ಉದ್ಘಾಟನೆ;

ಪುತ್ತೂರು:
“ಋಷಿಮುನಿಗಳ ತಪಸ್ಸು ಹಾಗೂ ಹಿರಿಯರ ದಿವ್ಯ ಸಂಸ್ಕಾರದ ಬುನಾದಿಯ ಮೇಲೆ ಬೆಳೆದಿರುವ ಭಾರತವು, ಜಗತ್ತಿನಾದ್ಯಂತ ಅಶಾಂತಿಯ ಕರಿಮೋಡ ಕವಿದಿದ್ದರೂ ತನ್ನ ಶಾಂತತೆಯನ್ನು ಕಾಪಾಡಿಕೊಳ್ಳುವ ಮೂಲಕ ಜಗತ್ತಿಗೆ ಮಾದರಿಯಾಗಿದೆ. ರಾಮಾಯಣ, ಮಹಾಭಾರತದಂತಹ ಪವಿತ್ರ ಗ್ರಂಥಗಳ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ನಮ್ಮ ದೇಶದಲ್ಲಿ, ಹನುಮಂತನ ಆದರ್ಶಗಳು ಅತ್ಯಂತ ಪ್ರೇರಣಾದಾಯಿಯಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಸುತ್ತಲಿನ ಪರಿಸರದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವಲ್ಲಿ ‘ಹನುಮಾನ್ ಚಾಲೀಸಾ’ ಪಠಣವು ಮಹತ್ವದ ಪಾತ್ರ ವಹಿಸುತ್ತಿದ್ದು, ಇದು ನಮ್ಮ ಉನ್ನತ ಪರಂಪರೆ ಮತ್ತು ಸಂಸ್ಕಾರಕ್ಕೆ ಸಾಕ್ಷಿಯಾಗಿದೆ” ಎಂದು ಕಾಲೇಜು ಆಡಳಿತ ಮಂಡಳಿ ಸದಸ್ಯ ಜಗನ್ನಾಥ್ ಎ. ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು ಇಲ್ಲಿನ ಹಿಂದಿ ವಿಭಾಗ, ಹಿಂದಿ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದೊಂದಿಗೆ ನಡೆದ ‘ಹನುಮಾನ್ ಚಾಲೀಸಾ ಪಠಣ ಸಪ್ತಾಹ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್,ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ, ಉಪನ್ಯಾಸಕಿ ಪೂಜಾ ವೈ.ಡಿ. ಮತ್ತು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಮೃತಲಕ್ಷ್ಮಿ ಹನುಮಾನ್ ಚಾಲೀಸಾ ಪಠಿಸಿದರು. ವಿದ್ಯಾರ್ಥಿನಿಯರಾದ ಧನಲಕ್ಷ್ಮಿ ಸ್ವಾಗತಿಸಿ, ದೀಪ್ತಿ ಪ್ರಭು ವಂದಿಸಿ, ಚೈತ್ರ ಪೂಜಾರಿ ನಿರೂಪಿಸಿದರು.

Related News

ಭಾರತದ ಅಧ್ಯಾತ್ಮಿಕ, ಸಾಂಸ್ಕೃತಿಕ ಚಿಂತನೆಗೆ ಮನಸೋತುಭಾರತಕ್ಕೆ ಬಂದವರು ಸಹೋದರಿ ನಿವೇದಿತಾ – ಡಾ. ಉಷಾರಾಣಿ ಬಿ;

ಭಾರತದ ಅಧ್ಯಾತ್ಮಿಕ, ಸಾಂಸ್ಕೃತಿಕ ಚಿಂತನೆಗೆ ಮನಸೋತುಭಾರತಕ್ಕೆ…

ಪುತ್ತೂರು, ಏಪ್ರಿಲ್, 12: ಹಿಂದೂ ಧರ್ಮವನ್ನು ತಮ್ಮ…

ವಿವೇಕಾನಂದ ಕಾಲೇಜಿನಲ್ಲಿ ‘ಹನುಮಾನ್ ಚಾಲೀಸಾ ಪಠಣ ಸಪ್ತಾಹ’ ಉದ್ಘಾಟನೆ;

ವಿವೇಕಾನಂದ ಕಾಲೇಜಿನಲ್ಲಿ ‘ಹನುಮಾನ್ ಚಾಲೀಸಾ ಪಠಣ…

ಪುತ್ತೂರು:“ಋಷಿಮುನಿಗಳ ತಪಸ್ಸು ಹಾಗೂ ಹಿರಿಯರ ದಿವ್ಯ ಸಂಸ್ಕಾರದ…