News & Updates

ಸಮಾಜದಲ್ಲಿ ಹೆಣ್ಣಿಗೆ ಪ್ರಾಧಾನ್ಯತೆ ಕೊಡದಿದ್ದರೆ ಪ್ರಪಂಚ ನೆಲೆ ನಿಲ್ಲಲು ಸಾಧ್ಯವಿಲ್ಲ: ಡಾ.ಅನಿಲಾ ದೀಪಕ್ ಶೆಟ್ಟಿ


ಪುತ್ತೂರು: ಮಾ.8; ಅಜ್ಞಾನ ನಮ್ಮನ್ನು ಪಾತಾಳಕ್ಕೆ ತಳ್ಳುತ್ತದೆ. ಅದನ್ನು ನಾವು ಹೋಗಲಾಡಿಸಿ ನಮ್ಮನ್ನು ನಾವು ಸುಜ್ಞಾನದೆಡೆಗೆ ಕೊಂಡೊಯ್ಯಬೇಕು. ಅದಕ್ಕಾಗಿ ಅತಿ ಹೆಚ್ಚು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಗೌರವ ದೊರಕಬೇಕು. ಹೆಣ್ಣಿಗೆ ಪ್ರಾಧಾನ್ಯತೆ ನೀಡದಿದ್ದಲ್ಲಿ ಪ್ರಪಂಚ ನೆಲೆ ನಿಲ್ಲಲು ಸಾಧ್ಯವಿಲ್ಲ ಇದಕ್ಕೆ ನಮ್ಮ ಪುರಾಣಗಳೇ ಪ್ರತ್ಯಕ್ಷ ಸಾಕ್ಷಿ ಎಂದು ಡಾ.ಅನಿಲಾ ದೀಪಕ್ ಶೆಟ್ಟಿ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ ಕಲಾ, ವಿಜ್ಞಾನ, ವಾಣಿಜ್ಯ (ಸ್ವಾಯತ್ತ) ಇಲ್ಲಿನ ಸಮಾಜಶಾಸ್ತ್ರ ವಿಭಾಗ,ಐಕ್ಯೂಎಸಿ ಘಟಕ, ಮಹಿಳಾ ಕೋಶ ಕುಂದುಕೊರತೆ ಮೇಲ್ಮನವಿ ಸಮಿತಿ ಮತ್ತು ಲೈಂಗಿಕ ಕಿರುಕುಳ ತಡೆ ಸಮಿತಿ ಸಂಯೋಗದಲ್ಲಿ ‘ಯುವಜನತೆಯ ವರ್ತನೆಯಲ್ಲಿ ಬದಲಾವಣೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 1975ರಲ್ಲಿ ಮಾರ್ಚ್ 8ನ್ನು ವಿಶ್ವ ಸಂಸ್ಥೆಯು ಮಹಿಳಾ ದಿನಾಚರಣೆಯನ್ನಾಗಿ ಘೋಷಿಸಿತು. ಈ ಮೂಲಕ ಮಹಿಳೆಯರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನೀಡಿತು. ಮಹಿಳೆಯರು ಎಲ್ಲೇ ಹೋದರು ತಮ್ಮ ಶಕ್ತಿಯನ್ನು ಕಳೆದುಕೊಳ್ಳದೆ ಬದುಕುವ ಧೈರ್ಯವನ್ನು ಹೊಂದಿರಬೇಕು . ಏಳು ಬೀಳು ಎಲ್ಲವೂ ಜೀವನದಲ್ಲಿ ಇರುತ್ತದೆ. ಆದರೆ ಆತ್ಮವಿಶ್ವಾಸದಿಂದ ಅದನ್ನು ಎದುರಿಸುವ ಸಾಮರ್ಥ್ಯವಿರಬೇಕು. ನಮ್ಮ ಜೀವನ ಬೇರೆ ಯಾರಿಂದಲೂ ನಿರ್ಮಾಣವಾಗಲು ಸಾಧ್ಯವಿಲ್ಲ.ಅದನ್ನು ನಾವೇ ರೂಪಿಸಿಕೊಳ್ಳಬೇಕು. ಅತಿಯಾದ ಸಾಮಾಜಿಕ ಜಾಲತಾಣದ ಬಳಕೆಯನ್ನು ಕಡಿಮೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಭೌತ ಶಾಸ್ತ್ರವಿಭಾಗದ ಮುಖ್ಯಸ್ಥ ಪ್ರೊ. ಎನ್ ನರಸಿಂಹ ಭಟ್ ಮಾತನಾಡಿ ಮಹಿಳೆಯರಿಗೆ ಬಹಳ ಸಾಮರ್ಥ್ಯವಿದೆ.ಪಠ್ಯದ ಜೊತೆ ಜೊತಗೆ ಪತ್ಯೇತರ ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಮಹಿಳಾ ಕೋಶದ ಸಂಯೋಜಕಿ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾಕಾಮತ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿನಿ ಶಿವಾನಿ.ಟಿ ಸ್ವಾಗತಿಸಿ, ವಿದ್ಯಾರ್ಥಿ ಅಕ್ಷಯ್ ಆರ್ ವಂದಿಸಿದರು. ಪ್ರಥಮ ಬಿಎ ವಿದ್ಯಾರ್ಥಿಗಳಾದ ಶ್ರೇಯ ಎಂ ಹಾಗೂ ಪ್ರಜ್ಞಾ ಜೆ ಪ್ರಾರ್ಥಿಸಿದರು, ದೇವಯಾನಿ.ಎಂ ಕಾರ್ಯಕ್ರಮವನ್ನು ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ.

ವಿವೇಕಾನಂದ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ.

ಪುತ್ತೂರು. ಅ, 22:*ಮಾನವನ ದೇಹದಲ್ಲಿ 5 ಲೀಟರ್ನಷ್ಟು…

ವಿವೇಕಾನಂದ ವಿದ್ಯಾವರ್ಧಕ ಸಂಘದಿOದ ದಿ.ಭಾಸ್ಕರ ಬಿ.ಅವರಿಗೆ ನುಡಿನಮನ.

ವಿವೇಕಾನಂದ ವಿದ್ಯಾವರ್ಧಕ ಸಂಘದಿOದ ದಿ.ಭಾಸ್ಕರ ಬಿ.ಅವರಿಗೆ…

ದಿ.ಭಾಸ್ಕರ ಬಿ ಅವರ ಸಮರ್ಪಣಾ ಮನೋಭಾವನಮಗೆಲ್ಲ ಮಾದರಿ:ಡಾ.ಪ್ರಭಾಕರ್…

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಪುತ್ತೂರು: ಸ್ವಂತ ಸಂಸ್ಥೆಯೊಂದನ್ನು ಸ್ಥಾಪಿಸುವ ಹಂಬಲ ಪ್ರತಿಯೊಬ್ಬನಲ್ಲೂಮೂಡಬೇಕು.…