
ಪುತ್ತೂರು: ಯಾವುದೇ ವೃತ್ತಿಗೆ ಸೇರಿದ ಮೇಲೆ ಕಾರ್ಯ ಚಟುವಟಿಕೆಗಳು
ಸುಲಲಿತವಾಗಿ, ಶಿಸ್ತು ಬದ್ಧವಾಗಿ ನಡೆಯಬೇಕಾದರೆ ಕಾರ್ಯ ಸೂಚಿ ಅತ್ಯಗತ್ಯ.
ದಿನದಿಂದ ದಿನ ತಂತ್ರಜ್ಞಾನಗಳ ಆವಿಷ್ಕಾರಗಳು ಅತಿ ವೇಗದಲ್ಲಿ
ಬೆಳವಣಿಗೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಮನುಷ್ಯರಾದ ನಾವು ಅದಕ್ಕೆ
ತಕ್ಕಂತೆ ಬದಲಾಗುವುದು ಅಗತ್ಯ. ಅದೇ ರೀತಿ ತಂತ್ರಜ್ಞಾನದ ಜೊತೆಗೆ
ಸ್ವಂತಿಕೆಯನ್ನು ಬೆಳೆಸಿಕೊಳ್ಳಲು ಗ್ರಂಥಾಲಯದ ಬಳಕೆಯನ್ನು ಹೆಚ್ಚು
ಮಾಡಬೇಕು. ಆಗ ಮಾತ್ರ ಅಧ್ಯಾಪಕರ ಸಾಮಾನ್ಯ ಜ್ಞಾನ ಹೆಚ್ಚಾಗಲು ಸಾಧ್ಯ.
ಅದೇ ರೀತಿ ಯಾವುದೇ ವೃತ್ತಿಗೆ ಬಂದ ನಂತರ ವೃತ್ತಿಯಲ್ಲಿರುವವರೊಂದಿಗೆ
ಪರಸ್ಪರ ಗೌರವ, ಪ್ರೀತಿ, ವಿಶ್ವಾಸ ಮತ್ತು ಗೌರವಿಸುವ ಮನೋಭಾವವನ್ನು
ರೂಡಿಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ
ಸAಚಾಲಕ ಮುರಳಿ ಕೃಷ್ಣ ಕೆ.ಎನ್. ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ
ಪುತ್ತೂರು ಇಲ್ಲಿನ ೨೦೨೬-೨೭ನೇ ಶೈಕ್ಷಣಿಕ ವರ್ಷದ ಉಪನ್ಯಾಸಕರ
ಪುನಶ್ಚೇತನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಿಗೆ ಶೈಕ್ಷಣಿಕ ವರ್ಷದ ಸಂಪೂರ್ಣ
ಮಾರ್ಗದರ್ಶನವನ್ನು ಕಾಲೇಜಿನ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ ಭಟ್
ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ
ಕಲ್ಲೂರಾಯ ಮಾತನಾಡಿ, ಅಧ್ಯಾಪಕ ವೃತ್ತಿಗೆ ಸೇರಿದ ಮೇಲೆ ಶಿಕ್ಷಕರು ಹೊಸ
ವಿಚಾರಗಳನ್ನು ತಿಳಿದುಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ಮೌಲ್ಯಯುತ
ಜೀವನ ಕೇವಲ ಕಾಲೇಜಿಗೆ ಸೀಮಿತವಾಗದೆ ಸಾಮಾಜಿಕ ವಾಗಿಯೂ
ಅನ್ವಯಿಸಿಕೊಳ್ಳಬೇಕು. ಈ ವೃತ್ತಿಯಲ್ಲಿ ಹಣ, ಐಷಾರಾಮಿ ಜೀವನಕ್ಕೆ ಆಸಕ್ತಿ ನೀಡದೆ
ವಿದ್ಯಾರ್ಥಿಗಳಿಗೆ ಏನು ಮುಖ್ಯ ಅದನ್ನು ನೀಡುವುದಕ್ಕೆ ಹೆಚ್ಚು ಸಮಯ
ನೀಡಬೇಕು. ಆಗ ಮಾತ್ರ ಉನ್ನತ ಹುದ್ದೆಗೆ ಸೇರಿದ ವಿದ್ಯಾರ್ಥಿಗಳು
ಅಧ್ಯಾಪಕರನ್ನು ಯಾವತ್ತು ಮರೆಯುವುದಿಲ್ಲ. ಇದು ಈ ವೃತ್ತಿಗೆ ಸಿಗುವ
ಗೌರವ ಎಂದರು.
ಕಾರ್ಯಕ್ರಮವನ್ನು ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ .ಎಸ್
ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ.
ನಿರ್ವಹಿಸಿದರು.
