
ಪುತ್ತೂರು, ಮೇ. 12: ಭಾರತದಲ್ಲಿ ಗುರುವನ್ನು ದೇವರೆಂದು
ಪೂಜಿಸುವವರೇ ಹೆಚ್ಚು. ಜಗತ್ತಿನ ಸರ್ವ ಶ್ರೇಷ್ಠ ವೃತ್ತಿಗಳಲ್ಲಿ ಗುರು
ವೃತ್ತಿಯೂ ಒಂದು. ಒಬ್ಬ ವಿದ್ಯಾರ್ಥಿ ಗುರುವನ್ನು ಪ್ರೀತಿ, ಗೌರವದಿಂದ ಕಂಡರೇ,
ಬದುಕಿನ ಕೊನೆಯವರೆಗೂ ಅವರನ್ನು ದೇವರೆಂದು ಪೂಜಿಸುತ್ತಾರೆ.
ನಮ್ಮನ್ನು ಶೂನ್ಯ ಎಂದು ಪರಿಗಣಿಸುವವರ ಮುಂದೆ ನಾವು ಸಾಧಿಸಿ
ತೋರಿಸುವುದು ಮುಖ್ಯ. ಒಬ್ಬ ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದು
ಮುಖ್ಯವಲ್ಲ. ಆದರೆ ಹೇಗೆ ಬದುಕಿದ ಎನ್ನುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ
ವಿವೇಕಾನಂದರoತಹ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು
ವಿದ್ಯಾರ್ಥಿಗಳಲ್ಲಿ ರಾಷ್ಟç ಪ್ರೇಮ, ದೇಶ ಭಕ್ತಿಯನ್ನು ಮೂಡಿಸಿ ಉತ್ತಮ
ಜೀವನವನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಪ್ರಮುಖವಾಗಿರುತ್ತದೆ ಎಂದು
ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುನಿರಾಜ ರೆಂಜಾಳ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ,
ವಿವೇಕಾನoದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಹಾಗೂ ವಿವೇಕಾನಂದ
ಶಿಕ್ಷಣ ಮಹಾವಿದ್ಯಾಲಯ, ತೆಂಕಿಲ, ಪುತ್ತೂರು ಇದರ ಸಹಯೋಗದಲ್ಲಿ ನಡೆದ
ವಿವೇಕ ಸ್ಮೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಬಿಎಡ್ ಕಾಲೇಜಿನ
ಆಡಳಿತ ಮಂಡಳಿಯ ಸದಸ್ಯ ರಮೇಶ ನಾಯಕ್ ಮಾತನಾಡುತ್ತಾ,
ವಿವೇಕಾನಂದರ ಕುರಿತ ಹೆಚ್ಚಿನ ಅಧ್ಯಯನವನ್ನು ನಮ್ಮ ಜೀವನದಲ್ಲಿ
ಅಳವಡಿಸಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ಗುರು ಶಿಷ್ಯ
ಸಂಬAಧಕ್ಕೆ ಗೌರವ ಕೊಡುವುದನ್ನು ಕಲಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್,
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇದರ ಭಾರತೀಯ
ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ವಿದ್ಯಾ
ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ಸ್ನಾತಕೋತ್ತರ
ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ. ಸ್ವಾಗತಿ, ವಿವೇಕಾನಂದ
ಬಿಎಡ್ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಎಂ ವಂದಿಸಿ, ಪ್ರಥಮ ಜೆಎಂಸಿ ವಿದ್ಯಾರ್ಥಿನಿ ಪ್ರಸಾದಿನಿ.ಕೆ
ನಿರೂಪಿಸಿದರು
