News & Updates

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವನಿರಂತರ ಪರಿಶ್ರಮ ಮತ್ತು ಶ್ರದ್ಧೆ ಶ್ರೇಷ್ಠಕಲಾವಿದರನ್ನಾಗಿ ರೂಪಿಸುತ್ತದೆ : ರೂಪಲೇಖ;

ಪುತ್ತೂರು, ಸೆ.23: ವಿದ್ಯಾರ್ಥಿಗಳಿಗೆ ನಮ್ಮ ರಾಷ್ಟಿçÃಯ ಪರಂಪರೆ ಹಾಗೂ
ಉನ್ನತ ಜೀವನ ಮೌಲ್ಯಗಳನ್ನು ಧಾರೆ ಎರೆಯುವುದೇ ಪ್ರತಿಭೋತ್ಸವದ
ಮೂಲ ಉದ್ದೇಶ. ಇಲ್ಲಿ ಗೆಲುವು-ಸೋಲಿಗಿಂತಲೂ ಸೃಜನಶೀಲತೆಯನ್ನು
ಅನಾವರಣಗೊಳಿಸುವುದೇ ನಿಜವಾದ ಯಶಸ್ಸು. ಕೇವಲ ವೈಯಕ್ತಿಕ
ಪ್ರದರ್ಶನಕ್ಕಷ್ಟೇ ಅಲ್ಲದೆ, ಸಾಂಘಿಕ ಭಾವನೆಯಿಂದ ಆಲೋಚಿಸಲು ಹಾಗೂ
ಭವಿಷ್ಯದಲ್ಲಿ ಸಮಾಜಮುಖಿಯಾಗಿ ಬೆಳೆಯಲು ಪ್ರತಿಭೋತ್ಸವದ ಉತ್ತಮ ಪಾಠ.
ವಿದ್ಯಾರ್ಥಿಗಳು ಕಲಾತ್ಮಕತೆಯನ್ನು ಪೋಷಿಸಲು ಸಮಯ ಮೀಸಲಿಡುವುದರ
ಜೊತೆಗೆ ನಿರಂತರ ಪರಿಶ್ರಮ ಮತ್ತು ಶ್ರದ್ಧೆ ಅತ್ಯಗತ್ಯ ಎಂದು ವಿವೇಕಾನಂದ
ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ರೂಪಲೇಖ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಇದರ ಲಲಿತಕಲಾ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ
ಪ್ರತಿಭೋತ್ಸವ 2026-27ನೇ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.
ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು
ಅನಾವರಣಗೊಳಿಸಲು ಇದೊಂದು ಅತ್ಯುತ್ತಮ ವೇದಿಕೆ. ಸೀಮಿತ ಕಾಲಾವಕಾಶದಲ್ಲಿ
ತಮ್ಮ ಕಲೆಯನ್ನು ಪ್ರದರ್ಶಿಸುವುದು ಸವಾಲಿನ ಕೆಲಸವಾದರೂ, ಲಭಿಸಿದ
ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಅಗತ್ಯ. ಈ ವೇದಿಕೆಯು
ವಿದ್ಯಾರ್ಥಿಗಳಲ್ಲಿನ ಸಂಕೋಚವನ್ನು ದೂರಮಾಡಿ, ಆತ್ಮವಿಶ್ವಾಸ ಮತ್ತು
ಧೈರ್ಯವನ್ನು ತುಂಬುತ್ತದೆ. ಕಲೆ ಪ್ರತಿಯೊಬ್ಬರಲ್ಲೂ ಅಡಗಿದ್ದು, ಅದನ್ನು
ಲೋಕಕ್ಕೆ ಪರಿಚಯಿಸಲು ಇಂತಹ ವೇದಿಕೆಗಳು ದಾರಿದೀಪವಾಗುತ್ತವೆ. ಇಂದಿನ ಈ
ಬಾಲಕಲಾವಿದರು ಮುಂದೆ ಪ್ರಸಿದ್ಧ ಕಲಾವಿದರಾಗಿ ಹೊರಹೊಮ್ಮಲಿ ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಡಾ. ರವಿಕಲಾ, ಲಲಿತಕಲಾ ಸಂಘದ
ವಿದ್ಯಾರ್ಥಿ ಪ್ರತಿನಿಧಿಗಳಾದ ವರಲಕ್ಷಿö್ಮ ಮತ್ತು ಸುಮಶ್ರೀ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ
ನಡೆಯಿತು. ಪ್ರಥಮ ಬಹುಮಾನವನ್ನು ತೃತೀಯ ಬಿಕಾಂ ತಂಡ, ದ್ವಿತೀಯ
ಬಹುಮಾನವನ್ನು ದ್ವಿತೀಯ ಬಿಎಸ್ಸಿ ತಂಡ ಮತ್ತು ತೃತೀಯ ಬಹುಮಾನವನ್ನು
ಪ್ರಥಮ ಬಿಎಸ್ಸಿ ತಂಡ ಪಡೆದುಕೊಂಡಿತು.


ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ
ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್ ಮಾತನಾಡಿ, ವಿದ್ಯಾರ್ಥಿಗಳ
ಸೃಜನಶೀಲತೆ ಹಾಗೂ ಪ್ರತಿಭೆ ಅದ್ಭುತವಾಗಿ ಮೂಡಿಬಂದಿದ್ದು, ವಿವಿಧ ದೇಶ-
ವಿದೇಶಗಳ ಕಲೆ ಮತ್ತು ಭವ್ಯ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದೆ.
ಈ ಪ್ರತಿಭೆಯನ್ನು ವಿದ್ಯಾರ್ಥಿಗಳು ಮತ್ತಷ್ಟು ಆಸಕ್ತಿಯಿಂದ
ಬೆಳೆಸಿಕೊಳ್ಳಬೇಕಿದೆ. ಅಂತೆಯೇ, ಈ ಕಲಾಸಂಪತ್ತನ್ನು ಮುಂದಿನ ಪೀಳಿಗೆಗೆ
ಪರಿಚಯಿಸಿ, ಜೀವಂತವಾಗಿಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ‍್ಯೋತ್ಸವ, ಗಣೇಶೋತ್ಸವ ಮತ್ತು ಓಣಂ ಹಬ್ಬದ
ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು
ಮಾಡಲಾಯಿತು. ಲಲಿತಕಲಾ ಸಂಘದ ಸಂಯೋಜಕಿ ಅಕ್ಷತಾ ನಾಯಕ್ ಸ್ವಾಗತಿಸಿ,
ಸಂಘದ ಪ್ರತಿನಿಧಿ ಭೂಮಿಕಾ ವಂದಿಸಿದರು. ಭಾರತೀಯ ಸಂಸ್ಕೃತಿ ಮತ್ತು
ಲಲಿತಕಲಾ ಸಂಘದ ಸಂಯೋಜಕಿ ಡಾ. ವಿದ್ಯಾ ಎಸ್ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವನಿರಂತರ ಪರಿಶ್ರಮ ಮತ್ತು ಶ್ರದ್ಧೆ ಶ್ರೇಷ್ಠಕಲಾವಿದರನ್ನಾಗಿ ರೂಪಿಸುತ್ತದೆ : ರೂಪಲೇಖ;

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವನಿರಂತರ ಪರಿಶ್ರಮ ಮತ್ತು…

ಪುತ್ತೂರು, ಸೆ.23: ವಿದ್ಯಾರ್ಥಿಗಳಿಗೆ ನಮ್ಮ ರಾಷ್ಟಿçÃಯ ಪರಂಪರೆ…

ವಿವೇಕಾನಂದ ಕಾಲೇಜಿನಲ್ಲಿ ಎನ್‌ಸಿಸಿ ಘಟಕದಿಂದ ಅಭಿನoದನಾ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಎನ್‌ಸಿಸಿ ಘಟಕದಿಂದ ಅಭಿನoದನಾ…

ಮಹಾವಿದ್ಯಾಲಯ, ಇಲ್ಲಿನ ಎನ್‌ಸಿಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿಅಭಿನಂದನಾ…

ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮವಿಭಾಗದಲ್ಲಿ ಸಂಶೋಧನಾ ಕಾರ್ಯಗಾರಸರಿಯಾದ ಸಂಶೋಧನೆಯೇ ಸುದ್ದಿಗಳಿಗೆ ಮೂಲ ಆಧಾರ :ಪ್ರೊ. ಡಾ. ಶ್ರೀನಿವಾಸ್ ಹೊಡೆಯಾಳ;

ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮವಿಭಾಗದಲ್ಲಿ ಸಂಶೋಧನಾ ಕಾರ್ಯಗಾರಸರಿಯಾದ…

ಪುತ್ತೂರು, ಸೆ.೨೨: ಸಂಶೋಧನೆ ಎಂಬುದು ನಿರಂತರವಾಗಿ ಹರಿಯುವಅನ್ವೇಷಣೆಯ…