
ಪುತ್ತೂರು: ಒಬ್ಬ ಉತ್ತಮ ಮಾರ್ಗದರ್ಶಕನ ಮಾಹಿತಿಗಳನ್ನು ಸಂಗ್ರಹಿಸಿ,
ಸoಪಾದಿಸಿ ಆ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸುವಂತಹ ಕಾರ್ಯ
ಉಪನ್ಯಾಸಕರಿಂದ ಆಗಬೇಕು. ಅದಕ್ಕಾಗಿಯೇ ಅನೇಕ ಉಪನ್ಯಾಸ
ಕಾರ್ಯಗಾರಗಳು ನಡೆದಿವೆ. ಇದರಿಂದ ನಾನಾ ರೀತಿಯ ಹೊಸ ಮಾಹಿತಿಗಳನ್ನು
ತಿಳಿದುಕೊಂಡಿರುವುದರ ಜೊತೆಜೊತೆಗೆ ಒಂದಷ್ಟು ವಿಚಾರಗಳನ್ನು
ಪುನಶ್ಚೇತನಗೊಳಿಸಿಕೊಂಡಿದ್ದೀರಿ. ಒಳ್ಳೆಯ ಅಂಶವನ್ನು ನಮ್ಮ ಜೀವನದಲ್ಲಿ
ನಾವು ಅಳವಡಿಸಿಕೊಳ್ಳುವಂತಾಗಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ
ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಅಧ್ಯಾಪಕರ ಅಭಿವೃದ್ಧಿ
ಘಟಕ,ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದಿಂದ
ಉಪನ್ಯಾಸಕರಿಗಾಗಿ ಆಯೋಜಿಸಿರುವ ದೃಷ್ಟಿ- ಉಪನ್ಯಾಸಕ ಅಭಿವೃದ್ಧಿ ಕಾರ್ಯಾಗಾರದ
ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ
ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ
ಉದ್ಯೋಗಗಳು ದೊರೆತಿರುವುದು ನಮ್ಮೆಲ್ಲರ ಭಾಗ್ಯ. ಇದನ್ನು ಸರಿಯಾದ
ರೀತಿಯಲ್ಲಿ ಬಳಸಿಕೊಂಡು ದೇಶದ ಅಭಿವೃದ್ಧಿಗೋಸ್ಕರ ಹಾಗೈ ಭಾರತೀಯ
ಜ್ಞಾನ ಪರಂಪರೆಯನ್ನು ಉಳಿಸಿಕೊಂಡು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿ.
ವಿದ್ಯಾರ್ಥಿಗಳಿಂದ ನಮ್ಮ ರಾಷ್ಟ್ರ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ
ಎoದರು.
ವಿವಿಧ ಕಾರ್ಯಾಗಾರ:
ಕಳೆದ ಐದು ದಿವಸದ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ವಿಚಾರಗಳ ಬಗೆಗೆ
ಉಪನ್ಯಾಸ ನಡೆಯಿತು. ಪರಿಣಾಮಕಾರಿ ಸಂವಹನ ಮತ್ತು ತರಗತಿ ನಿರ್ವಹಣೆಯ
ಬಗ್ಗೆ ಮಂಗಳೂರು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ
ಅಧ್ಯಾಪಕ ಡಾ. ಕುಮಾರಸ್ವಾಮಿ ಎಚ್, ಹದಿಹರೆಯದವರನ್ನು ಅರ್ಥಮಾಡಿಕೊಳ್ಳುವ
ವಿಚಾರದ ಕುರಿತು ಮಕ್ಕಳ ತಜ್ಞೆ ಡಾ. ಸುಲೇಖಾ ವರದರಾಜ್, ಪಠ್ಯೇತರ
ಚಟುವಟಿಕೆಗಳ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವುದರ
ಕುರಿತು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿದ್ಯಾರ್ಥಿ
ಕ್ಷೇಮ ಪಾಲನಾಧಿಕಾರಿ ಡಾ. ಅರುಣ್ ಪ್ರಕಾಶ್, ಬೋಧನೆಯಲ್ಲಿ ಕೃತಕ ಬುದ್ಧಿಮತ್ತೆ
: ಸಾಧ್ಯತೆಗಳು ಮತ್ತು ಸವಾಲುಗಳು ಇದರ ಕುರಿತು ಮಂಗಳೂರು ಸೈಂಟ್
ಜೋಸೆಫ್ ಇಂಜಿನಿಯರಿoಗ್ ಕಾಲೇಜಿನ ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ
ಮುಖ್ಯಸ್ಥ ಡಾ. ಹರೀಶ್ ಪಿ, ಸಂಶೋಧನೆ ಮತ್ತು ಪ್ರಕಟಣೆ ಈ ವಿಷಯದ ಬಗೆಗೆ
ನಿವೃತ್ತ ಪ್ರಾಂಶುಪಾಲರು, ಅರ್ಥಶಾಸ್ತ್ರ ಪ್ರಾಧ್ಯಾಪಕರು ಹಾಗೂ
ಅಂತರಾಷ್ಟ್ರೀಯ ಅರ್ಥಶಾಸ್ತ್ರಜ್ಞರು ಮತ್ತು ಪುತ್ತೂರು ಸೇಂಟ್ ಫಿಲೋಮಿನಾ
ಕಾಲೇಜಿನ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಪಿ.ಎಸ್ ರಾಧಾಕೃಷ್ಣ ಐಕ್ಯೂ ಎಸಿ
ಮತ್ತು ನ್ಯಾಕ್ ಕುರಿತು ಒಂದು ಅವಲೋಕನದ ಬಗೆಗೆ ಹಾಗೂ ವಿವೇಕಾನಂದ
ಕಾಲೇಜಿನ ಐಕ್ಯೂ ಎಸಿ ಸಂಯೋಜಕಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ,
ವಿವೇಕಾನಂದ ಇಂಜಿನಿಯರಿoಗ್ ಕಾಲೇಜಿನ ಹಿರಿಯ ಪ್ರಯೋಗಾಲಯ ಸಹಾಯಕ
ದಿನೇಶ್, ವೃತ್ತಿ ನೈತಿಕತೆಯ ಕುರಿತು ನಿವೃತ್ತ ಸಂಸ್ಕೃತ ಉಪನ್ಯಾಸಕ ಕಜಂಪಾಡಿ
ಸುಬ್ರಹ್ಮಣ್ಯ ಭಟ್ ಕಾರ್ಯಗಾರವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್,
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ವಿಶೇಷ ಅಧಿಕಾರಿ, ಶಿಕ್ಷಕರ ಅಭಿವೃದ್ಧಿ
ಡಾ. ವಿದ್ಯಾ ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಸ್ನಾತಕೋತ್ತರ
ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ನಿರ್ವಹಿಸಿದರು.
