News & Updates

ಸಮಾಜದ ಸುಧಾರಣೆಗೆ ಪರಿಣಾಮಕಾರಿ ಬರವಣಿಗೆಗಳು ಅಗತ್ಯ- ಡಾ. ವಿಘ್ನೇಶ್ವರವರ್ಮುಡಿ;

ಪುತ್ತೂರು; ಸಂಶೋದನಾತ್ಮಕ ಬರವಣಿಗೆಯ ಹವ್ಯಾಸವು ಒಬ್ಬ
ಉಪನ್ಯಾಸಕನಿಗೆ ಅತ್ಯಗತ್ಯ. ಒಂದು ಸಮಾಜವನ್ನು ಉತ್ತಮ ಬರಹಗಳ
ಮುಖೇನವೂ ನಾವು ಜಾಗೃತಗೊಳಿಸಿ ಅಭಿವೃದ್ಧಿ ಪಡಿಸಬಹುದು. ಸಮಾಜದ
ಅಭಿವೃದ್ಧಿಯಲ್ಲಿ ಒಬ್ಬ ಶಿಕ್ಷಕನ ಪಾತ್ರವೂ ಅತ್ಯಮೂಲ್ಯವಾದುದು. ಆದ್ದರಿಂದ
ಉಪನ್ಯಾಸಕರು ವಿವಿಧ ವಿಷಯಗಳಲ್ಲಿ ಲೇಖನವನ್ನು ಪ್ರಕಟಿಸಲಿಸಲು
ಮುಂದಾಗಬೇಕು. ಪರಿಣಾಮಕಾರಿ ಲೇಖನಗಳನ್ನು ಉಪನ್ಯಾಸಕರು ಪ್ರಕಟಿಸಿದಾಗ
ವಿದ್ಯಾರ್ಥಿಗಳಿಗೆ ತುಂಬಾ ವೇಗವಾಗಿ ತಲುಪಲು ಸಾಧ್ಯ. ಜೊತೆಗೆ ಉಪನ್ಯಾಸಕರ
ವೈಯಕ್ತಿಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ನಿವೃತ್ತ
ಪ್ರಾಂಶುಪಾಲರು, ಅರ್ಥಶಾಸ್ತ್ರ ಪ್ರಾಧ್ಯಾಪಕರು ಹಾಗೂ ಅಂತರಾಷ್ಟ್ರೀಯ
ಅರ್ಥಶಾಸ್ತ್ರಜ್ಞ ಡಾ. ವಿಘೇಶ್ವರ ವರ್ಮುಡಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು ಇಲ್ಲಿನ ಅಧ್ಯಾಪಕರ ಅಭಿವೃದ್ಧಿ ಘಟಕ, ವಿವೇಕಾನಂದ ಸಂಶೋಧನಾ
ಕೇoದ್ರ ಮತ್ತು ಐಕ್ಯೂಎಸಿ ಘಟಕದಿಂದ ಉಪನ್ಯಾಸಕರಿಗಾಗಿ ಆಯೋಜಿಸಿರುವ ದೃಷ್ಟಿ-
ಉಪನ್ಯಾಸಕರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ
ಮಾತನಾಡಿದರು.
ಸಂಶೋಧನೆಗಳಿಗೆ ಹೆಚ್ಚು ಒತ್ತು ಕೊಟ್ಟು, ಸಂಶೋಧನಾ ಲೇಖನಗಳನ್ನು
ಹೊರತರುವ ಕಾರ್ಯಗಳಾಗಬೇಕು. ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನ
ಭಂಡಾರಗಳನ್ನು ಹೆಚ್ಚಿಸಿಕೊಂಡು ಉತ್ತಮ ಪುಸ್ತಕಗಳನ್ನು
ಪ್ರಕಟಿಸಬೇಕು. ಬರವಣಿಗೆಗಳು ಹೆಚ್ಚಾದಂತೆ ಸಮಾಜದಲ್ಲಿ ಹೆಸರು ಶಾಶ್ವತವಾಗಿ
ಉಳಿಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ
ಕೆ.ಎನ್, ಕಾಲೇಜಿನ ಪ್ರಾಂಶುಪಾಲ ಪ್ರೊ..ಶ್ರೀಕೃಷ್ಣ ಗಣರಾಜ ಭಟ್, ಸಮಾಜಶಾಸ್ತ್ರ
ವಿಭಾಗದ ಮುಖ್ಯಸ್ಥೆ ಹಾಗೂ ವಿಶೇಷ ಅಧಿಕಾರಿ (ಶಿಕ್ಷಕರ ಅಭಿವೃದ್ಧಿ) ಡಾ. ವಿದ್ಯಾ ಎಸ್,
ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ (ಆಡಳಿತ) ಮನಮೋಹನ ಎಂ
ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಂಗ್ಲ ವಿಭಾಗದ ಮುಖ್ಯಸ್ಥ, ಕಲಾ
ವಿಭಾಗದ ಡೀನ್ ಬಾಲಕೃಷ್ಣ ಹೆಚ್ ನಿರ್ವಹಿಸಿದರು.

Related News

ಸಮಾಜದ ಸುಧಾರಣೆಗೆ ಪರಿಣಾಮಕಾರಿ ಬರವಣಿಗೆಗಳು ಅಗತ್ಯ- ಡಾ. ವಿಘ್ನೇಶ್ವರವರ್ಮುಡಿ;

ಸಮಾಜದ ಸುಧಾರಣೆಗೆ ಪರಿಣಾಮಕಾರಿ ಬರವಣಿಗೆಗಳು ಅಗತ್ಯ-…

ಪುತ್ತೂರು; ಸಂಶೋದನಾತ್ಮಕ ಬರವಣಿಗೆಯ ಹವ್ಯಾಸವು ಒಬ್ಬಉಪನ್ಯಾಸಕನಿಗೆ ಅತ್ಯಗತ್ಯ.…

ವಿವೇಕಾನಂದ ಕಾಲೇಜಿನಲ್ಲಿ ಶೈಕ್ಷಣಿಕ ಕಾರ್ಯಾಗಾರದ ಸಮಾರೋಪ;

ವಿವೇಕಾನಂದ ಕಾಲೇಜಿನಲ್ಲಿ ಶೈಕ್ಷಣಿಕ ಕಾರ್ಯಾಗಾರದ ಸಮಾರೋಪ;

ಪುತ್ತೂರು: ಒಬ್ಬ ಉತ್ತಮ ಮಾರ್ಗದರ್ಶಕನ ಮಾಹಿತಿಗಳನ್ನು ಸಂಗ್ರಹಿಸಿ,ಸoಪಾದಿಸಿ…

ವಿವೇಕಾನಂದರ ಹಾಗೂ ನಾರಾಯಣ ಗುರುಗಳ ಚಿಂತನೆಗಳು ಎಂದಿಗೂಪ್ರಸ್ತುತ: ಪ್ರೊ. ರತ್ನಾಕರ ಮಲ್ಲಮೂಲೆ;

ವಿವೇಕಾನಂದರ ಹಾಗೂ ನಾರಾಯಣ ಗುರುಗಳ ಚಿಂತನೆಗಳು…

ಪುತ್ತೂರು, ಜು. 13: ಸ್ವಾಮಿ ವಿವೇಕಾನಂದ ಹಾಗೂ…