News & Updates

ವಿವೇಕಾನಂದ ಕಾಲೇಜಿನಲ್ಲಿ ಸರ್ಟಿಫಿಕೇಷನ್ ಕುರಿತಾದ ಮಾಹಿತಿ ಕಾರ್ಯಾಗಾರ;

ಪುತ್ತೂರು, ಸೆ.24: ಕಾರ್ಪೋರೇಟ್ ಕ್ಷೇತ್ರದಲ್ಲಿ ನಾವು ಆಸಕ್ತಿಯಿಂದ
ತೊಡಗಿಸಿಕೊoಡಾಗ ಒಳ್ಳೆಯ ಭವಿಷ್ಯವಿದೆ. ಇಲ್ಲಿ ಸದಾ ಬದಲಾಗುವ
ಕಾರ್ಯತಂತ್ರಗಳ ಬಗ್ಗೆ ನಾವು ಜಾಗೃತರಾಗುತ್ತಾ ಅವುಗಳನ್ನು
ಅಳವಡಿಸಿಕೊಳ್ಳುವುದು ಅವಶ್ಯಕ. ವಿದ್ಯಾರ್ಥಿಗಳು ತಮ್ಮ ಪಠ್ಯ ವಿಷಯಗಳ
ಕಲಿಕೆಯೊಂದಿಗೆ ಅದಕ್ಕೆ ಹೊರತಾದ ಅನೇಕ ಕೌಶಲ್ಯಗಳನ್ನು ಕಲಿಯುವುದು
ಮುಖ್ಯ. ನಮ್ಮ ಕಾರ್ಯಕ್ಷೇತ್ರಕ್ಕೆ ಪೂರಕವಾದ ಸರ್ಟಿಫಿಕೇಟ್ ಕೋರ್ಸ್
ಮಾಡುವುದು ನಮ್ಮ ವೃತ್ತಿ ಜೀವನದಲ್ಲಿ ಉಪಯೋಗವಾಗಬಲ್ಲದು ಎಂದು
ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಮೋರ್ಗನ್ ಸ್ಟಾö್ಯನ್ಲಿ ಸಂಸ್ಥೆಯ
ಅಸೋಸಿಯೇಟ್ ನಿರಂಜನ್ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ
(ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯುಎಸಿಯ
ಸಹಯೋಗದೊಂದಿಗೆ ‘ಫ್ರಮ್ ಸರ್ಟಿಫಿಕೇಷನ್ ಟು ಕೆರಿಯರ್ : ಅಪ್‌ಸ್ಕಿಲ್ಲಿಂಗ್ ಫಾರ್
ಕೆರಿಯರ್ ಸಕ್ಸಸ್’ ಎಂಬ ಸರ್ಟಿಫಿಕೇಷನ್ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ.ಬಿ

ಕಾರ್ಯಕ್ರಮದಲ್ಲಿ
ಪ್ರಾಸ್ತಾವಿಕವಾಗಿ ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ವಿದ್ಯಾರ್ಥಿನಿಯರಾದ
ಸ್ವರ್ಣ ಹಾಗೂ ಅನಘ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಪ್ರಥಮ ಎಂಕಾo ವಿದ್ಯಾರ್ಥಿನಿ ವಂಶಿ ಸ್ವಾಗತಿಸಿ ಪ್ರತೀಕ್ಷಾ
ಯು.ಕೆ ವಂದಿಸಿದರು. ಪ್ರಥಮ ಎಂಕಾo ವಿದ್ಯಾರ್ಥಿ ಅಭಯಕೃಷ್ಣ. ಟಿ ನಿರೂಪಿಸಿದರು.

Related News

ಗುರುಗಳ ಮಾರ್ಗದರ್ಶನವಿದ್ದರೆ ಪ್ರತಿಯೊಂದುಕೆಲಸವೂ ಪರಿಪೂರ್ಣ : ಸುಬ್ರಹ್ಮಣ್ಯ ಭಟ್ ಕಜಂಪಾಡಿವಿವೇಕಾನoದ ಕಾಲೇಜಿನಲ್ಲಿ ‘ಪ್ರೇರಣಾ 2026’ ವಾರ್ಷಿಕ ಶಿಬಿರ ಉದ್ಘಾಟನೆ;

ಗುರುಗಳ ಮಾರ್ಗದರ್ಶನವಿದ್ದರೆ ಪ್ರತಿಯೊಂದುಕೆಲಸವೂ ಪರಿಪೂರ್ಣ :…

ಪುತ್ತೂರು,ಅ.1: ಭಾರತೀಯ ಇತಿಹಾಸ, ಈ ಮಣ್ಣಿನ ಗ್ರಂಥಗಳುಸAಸ್ಕೃತಿಯನ್ನು…

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಬಿಯಾಂಡ್ ಲೇಬಲ್ಸ್’ ಕಾರ್ಯಗಾರ;

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಬಿಯಾಂಡ್ ಲೇಬಲ್ಸ್’…

ಪುತ್ತೂರು,28: ಹಿಂದಿನ ಕಾಲದಿಂದಲೂ ಸಮಾಜದಲ್ಲಿ ಲೈಂಗಿಕ ಕಿರುಕುಳನಡೆಯುತ್ತಿದ್ದು,…

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಪ್ಲಾಂಟ್ಸ್ ಫಾರ್ ಬೆಟರ್ ಲಿವಿಂಗ್ :ಟುಡೆ ಆ್ಯಂಡ್ ಟುಮಾರೊ’ ಉಪನ್ಯಾಸ ಕಾರ್ಯಕ್ರಮವೈಜ್ಞಾನಿಕ ಅನ್ವೇಷಗಳಿಗೆ ಕುತೂಹಲವೇ ತಳಹದಿ : ಪ್ರೊ.ಜಿ.ಆರ್. ಜನಾರ್ಧನ;

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಪ್ಲಾಂಟ್ಸ್ ಫಾರ್…

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಮತ್ತು…