News & Updates

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಬಿಯಾಂಡ್ ಲೇಬಲ್ಸ್’ ಕಾರ್ಯಗಾರ;

ಪುತ್ತೂರು,28: ಹಿಂದಿನ ಕಾಲದಿಂದಲೂ ಸಮಾಜದಲ್ಲಿ ಲೈಂಗಿಕ ಕಿರುಕುಳ
ನಡೆಯುತ್ತಿದ್ದು, ಅದರ ವಿರುದ್ಧ ಧ್ವನಿಯೆತ್ತುವ ಸಾಮರ್ಥ್ಯವನ್ನು ಯಾರೂ
ಹೊಂದದೆ ಇರುವುದರಿಂದ ಈ ಹೀನ ಕೃತ್ಯಗಳನ್ನು ಎಸಗುವ ಘಟನೆ ಹೆಚ್ಚಾಗಿದೆ.
ಇಂತಹ ವಿಷಯಗಳ ಕುರಿತು ಹೆಣ್ಣು ಮಕ್ಕಳಿಗೆ ತಿಳಿಯಹೇಳುವ ಜೊತೆಗೆ
ಗಂಡುಮಕ್ಕಳಲ್ಲೂ ಈ ಕುರಿತು ಜಾಗೃತಿ ಮೂಡಿಸುವುದು ಅವಶ್ಯ. ಫೋಕ್ಸೋ
ಕಾನೂನಿನ ಅರಿವು ಅಪರಾಧಗಳನ್ನು ಕಡಿಮೆಗೊಳಿಸುವಲ್ಲಿ ಸಹಾಯಕ. ಈ ನಿಟ್ಟಿನಲ್ಲಿ
ಕಾಲೇಜಿನ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ವರ್ತಿಸಿ ಉಜ್ವಲ ಭವಿಷ್ಯವನ್ನು
ರೂಪಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಪ್ರಿಯಾ ರಾಜ್‌ಮೋಹನ್
ಹೇಳಿದರು.

ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ),
ಪುತ್ತೂರು ಇಲ್ಲಿನ ಸೆಕ್ಷÄವಲ್ ಹೆರಾಸ್ಮೆಂಟ್ ಪ್ರಿವೆನ್ಷನ್ ಸೆಲ್, ವಿಮೆನ್ ಗ್ರಿವೇನ್ಸ್
ರಿಡ್ರೆಸಲ್ ಸೆಲ್, ಮಹಿಳಾ ಘಟಕ, ಎನ್ ಸಿ ಸಿ ,ಎನ್ ಎಸ್ ಎಸ್, ರೋವರ್ಸ್ ಮತ್ತು ರೇಂಜರ್ಸ್, ಯುತ್
ರೆಡ್‌ಕ್ರಾಸ್ ಸೊಸೈಟಿ, ಜೆಂಡರ್ ಮೈನಾರಿಟಿ ಸೆಲ್, ಸಮಾಜಶಾಸ್ತç ಮತ್ತು
ಮನೋವಿಜ್ಞಾನ ವಿಭಾಗ, ವಿದ್ಯಾರ್ಥಿ ಸಂಘ ಹಾಗೂ ಐಕ್ಯೂಎಸಿ ಇವರ ಸಹಭಾಗಿತ್ವದಲ್ಲಿ
‘ಬಿಯಾಂಡ್ ಲೇಬಲ್ಸ್’ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್ ಕಾರ್ಯಕ್ರಮವನ್ನು
ಉದ್ದೇಶಿಸಿ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದರಿಂದ
ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ತಪ್ಪು
ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಅರಿವು ಮೂಡಿಸಬಹುದು ಎಂದರು.
ಕಾರ್ಯಕ್ರಮದ ಸಂಯೋಜಕಿ, ಕನ್ನಡ ವಿಭಾಗದ ಉಪನ್ಯಾಸಕಿ ಗೀತಾ ಕುಮಾರಿ ಟಿ.
ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ
ಸಂಯೋಜಕಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಲಾ ವಿಭಾಗದ ವಿದ್ಯಾರ್ಥಿನಿ ಚೈತನ್ಯ ನಿರ್ವಹಿಸಿದರು.

Related News

ಗುರುಗಳ ಮಾರ್ಗದರ್ಶನವಿದ್ದರೆ ಪ್ರತಿಯೊಂದುಕೆಲಸವೂ ಪರಿಪೂರ್ಣ : ಸುಬ್ರಹ್ಮಣ್ಯ ಭಟ್ ಕಜಂಪಾಡಿವಿವೇಕಾನoದ ಕಾಲೇಜಿನಲ್ಲಿ ‘ಪ್ರೇರಣಾ 2026’ ವಾರ್ಷಿಕ ಶಿಬಿರ ಉದ್ಘಾಟನೆ;

ಗುರುಗಳ ಮಾರ್ಗದರ್ಶನವಿದ್ದರೆ ಪ್ರತಿಯೊಂದುಕೆಲಸವೂ ಪರಿಪೂರ್ಣ :…

ಪುತ್ತೂರು,ಅ.1: ಭಾರತೀಯ ಇತಿಹಾಸ, ಈ ಮಣ್ಣಿನ ಗ್ರಂಥಗಳುಸAಸ್ಕೃತಿಯನ್ನು…

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಬಿಯಾಂಡ್ ಲೇಬಲ್ಸ್’ ಕಾರ್ಯಗಾರ;

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಬಿಯಾಂಡ್ ಲೇಬಲ್ಸ್’…

ಪುತ್ತೂರು,28: ಹಿಂದಿನ ಕಾಲದಿಂದಲೂ ಸಮಾಜದಲ್ಲಿ ಲೈಂಗಿಕ ಕಿರುಕುಳನಡೆಯುತ್ತಿದ್ದು,…

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಪ್ಲಾಂಟ್ಸ್ ಫಾರ್ ಬೆಟರ್ ಲಿವಿಂಗ್ :ಟುಡೆ ಆ್ಯಂಡ್ ಟುಮಾರೊ’ ಉಪನ್ಯಾಸ ಕಾರ್ಯಕ್ರಮವೈಜ್ಞಾನಿಕ ಅನ್ವೇಷಗಳಿಗೆ ಕುತೂಹಲವೇ ತಳಹದಿ : ಪ್ರೊ.ಜಿ.ಆರ್. ಜನಾರ್ಧನ;

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಪ್ಲಾಂಟ್ಸ್ ಫಾರ್…

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಮತ್ತು…