News & Updates

ವಿವೇಕಾನಂದ ಪದವಿ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾಗಿ ಪ್ರಕಾಶ್ ಕುಮಾರ್ ಪಿ;

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ(ಸ್ವಾಯತ್ತ) ಪುತ್ತೂರು ಇದರ ಪರೀಕ್ಷಾಂಗ ಕುಲಸಚಿವರಾಗಿ
ಕಾಲೇಜಿನ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ
ನೇಮಕಗೊಂಡಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ
ತಿಳಿಸಿದೆ.
ಎಂಎಸ್ಸಿ ಹಾಗೂ ಎಂಟೆಕ್ ಪದವೀಧರರಾಗಿರುವ ಇವರು 26 ವರ್ಷಗಳಿಂದ ಕಾಲೇಜಿನ
ಗಣಕ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಪ್ರಸ್ತುತ ವಿಭಾಗ
ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಕಾಲೇಜಿನ ಐಕ್ಯೂಎಸಿ
ಘಟಕದ ಸಹಸಂಯೋಜಕರಾಗಿಯೂ ಸೇವೆ ಸಲ್ಲಿಸಿರುವ ಇವರು
ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ಶಾಸ್ತ್ರ ಅಸೋಸಿಯೇಷನ್ ನ
ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಜೊತೆಗೆ ಕಾಲೇಜಿನ
ಗಣಕ ಶಾಸ್ತ್ರದ ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಾಜೆಕ್ಟ್
ತಯಾರಿಕೆಯಲ್ಲಿಯೂ ಮಾರ್ಗದರ್ಶನವನ್ನು ನೀಡಿರುತ್ತಾರೆ. ಪ್ರಸ್ತುತ
ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Related News

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕ ಸ್ಮೃತಿ ಕಾರ್ಯಕ್ರಮಜಗತ್ತಲ್ಲೇ ಸರ್ವ ಶ್ರೇಷ್ಠ ಕೆಲಸ ಶಿಕ್ಷಣ ವೃತ್ತಿ: ಮುನಿರಾಜ ರೆಂಜಾಳ;

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕ ಸ್ಮೃತಿ…

ಪುತ್ತೂರು, ಮೇ. 12: ಭಾರತದಲ್ಲಿ ಗುರುವನ್ನು ದೇವರೆಂದುಪೂಜಿಸುವವರೇ…

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ  ಸಂಕಿರಣ

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಭಾರತದ ಭವಿಷ್ಯದತ್ತ ಯುವಜನತೆ ಗಮನಹರಿಸಬೇಕು- ಪ್ರೊ.ಗೋಪಕುಮಾರ್; ಪುತ್ತೂರು:…

ವಿದ್ಯಾರ್ಥಿಗಳ ಬೆಳವಣಿಗೆಗೆ ಸಂಸ್ಥೆಯೇ ಮೂಲ; ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ;

ವಿದ್ಯಾರ್ಥಿಗಳ ಬೆಳವಣಿಗೆಗೆ ಸಂಸ್ಥೆಯೇ ಮೂಲ; ಶ್ರೀ…

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಮತ್ತುಸಂಶೋಧನಾ ಕೇಂದ್ರದ ಕಟ್ಟಡದ…