News & Updates

ವಿದ್ಯಾರ್ಥಿಗಳ ಬೆಳವಣಿಗೆಗೆ ಸಂಸ್ಥೆಯೇ ಮೂಲ; ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ;

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಮತ್ತು
ಸಂಶೋಧನಾ ಕೇಂದ್ರದ ಕಟ್ಟಡದ ಭೂಮಿಪೂಜೆ ಮತ್ತು ಶಿಲಾನ್ಯಾಸ;

ಪುತ್ತೂರು ಮೇ. 2: ಕಾಲದಿಂದ ಕಾಲಕ್ಕೆ ಕಾಲೇಜು
ಬೆಳೆಯುತ್ತದೆ. ಅನುಕೂಲಗಳನ್ನು ಹೆಚ್ಚುಗೊಳಿಸುತ್ತಾ
ಹೋಗುತ್ತದೆ. ವಿದ್ಯಾರ್ಥಿಗಳು ಅವುಗಳನ್ನು ಬಳಸಬೇಕು.
ಇದರಿಂದ ವಿದ್ಯಾರ್ಥಿಗಳ ಅಂತರಾಳದಲ್ಲಿರುವ ಬೆಳಕನ್ನು ಸಂಸ್ಥೆ
ಹಾಗೂ ಗುರುಗಳಿಗೆ ಬೆಳಗಿಸಲು ಸಾಧ್ಯವಾಗುತ್ತದೆ ಎಂದು
ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ
ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ
ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸoಸ್ಥೆಯಾದ
ವಿವೇಕಾನoದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ
(ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನ ಮತ್ತು
ಸಂಶೋಧನ ಕೇಂದ್ರದ ಉದ್ದೇಶಿತ ನೂತನ ಕಟ್ಟಡದ
ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ ಬಳಿಕ ನಡೆದ
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ
ಭಟ್ ಮಾತನಾಡಿ, ಭಾರತ ಜ್ಞಾನಕ್ಕೋಸ್ಕರ ಹಾತೊರೆಯುವ
ದೇಶ. ಹಲವಾರು ಮಂದಿ ಹೊಸತು ತಿಳಿದು ದೇಶವನ್ನು ಉನ್ನತ
ಸ್ಥಾನಕ್ಕೇರಿಸಿದ್ದಾರೆ. ಇನ್ನೊಬ್ಬರ ನಾಶಕ್ಕಾಗಿ ಬೇರೆ ದೇಶಗಳು
ಯೋಜನೆ ತಯಾರಿಸುತ್ತಿರುವಾಗ, ಭಾರತ
ಸಮಾಜೋದ್ಧಾರಕರಾಗಿ ಬದುಕುವುದು ಹೇಗೆ ಎಂಬುದನ್ನು
ತೋರಿಸಿಕೊಟ್ಟಿದೆ ಎಂದರು.
ವಿದ್ಯಾರ್ಥಿಗಳು ಭಾರತೀಯ ಚಿಂತನೆಯನ್ನು ಅಧ್ಯಯನ
ಮಾಡುವುದರೊಂದಿಗೆ ಉತ್ತಮ ಶಿಕ್ಷಣವನ್ನು ಪಡೆಯಬೇಕು.
ಶಿಕ್ಷಣವು ಶಕ್ತಿಯನ್ನು ನೀಡುತ್ತದೆ. ಆ ಬೇರನ್ನು ಹಿಡಿದು
ಬೆಳೆಯಬೇಕು. ಪ್ರತಿಯೊಬ್ಬನೂ ದೇಶಕ್ಕೋಸ್ಕರ
ಬದುಕುವ ಪ್ರಜೆಯಾಗಬೇಕು ಎಂದು ನುಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂWದÀ ಕಾರ್ಯದರ್ಶಿ ಡಾ. ಕೆ. ಎಂ.
ಕೃಷ್ಣ ಭಟ್, ಸಂಘದ ಸದಸ್ಯರಾದ ಬಲರಾಮ ಆಚಾರ್ಯ, ಡಾ.
ಸುಧಾ ರಾವ್, ಸತೀಶ್ ಹಾಗೂ ಕಾಲೇಜು ಆಡಳಿತ ಮಂಡಳಿ
ಪದಾಧಿಕಾರಿಗಳಾದ ಶ್ರೀನಿವಾಸ ಸಾಮಂತ, ಶುಭಾ ಅಡಿಗ,

ಸುಕುಮಾರ್ ರಾವ್, ಶೋಭಾ ಕೊಳತ್ತಾಯ ಮತ್ತು ಉದ್ದೇಶಿತ
ಕಟ್ಟಡದ ಇಂಜಿನಿಯರ್ ರವಿರಾಮ್ ಮತ್ತಿತ್ತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಶ್ರೀವಿದ್ಯಾ ಪಾದೆಕಲ್ಲು ಪ್ರಾರ್ಥಿಸಿ,
ಕಾಲೇಜಿನ ಪ್ರಾಚಾರ್ಯ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್
ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಡಾ. ವಿಜಯ
ಸರಸ್ವತಿ ವಂದಿಸಿ, ಕಾಲೇಜಿನ ವಿಶೇಷಾಧಿಕಾರಿ ಡಾ. ಮನಮೋಹನ ಎಂ.
ಕಾರ್ಯಕ್ರಮ ನಿರೂಪಿಸಿದರು.

Related News

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕ ಸ್ಮೃತಿ ಕಾರ್ಯಕ್ರಮಜಗತ್ತಲ್ಲೇ ಸರ್ವ ಶ್ರೇಷ್ಠ ಕೆಲಸ ಶಿಕ್ಷಣ ವೃತ್ತಿ: ಮುನಿರಾಜ ರೆಂಜಾಳ;

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕ ಸ್ಮೃತಿ…

ಪುತ್ತೂರು, ಮೇ. 12: ಭಾರತದಲ್ಲಿ ಗುರುವನ್ನು ದೇವರೆಂದುಪೂಜಿಸುವವರೇ…

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ  ಸಂಕಿರಣ

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಭಾರತದ ಭವಿಷ್ಯದತ್ತ ಯುವಜನತೆ ಗಮನಹರಿಸಬೇಕು- ಪ್ರೊ.ಗೋಪಕುಮಾರ್; ಪುತ್ತೂರು:…

ವಿದ್ಯಾರ್ಥಿಗಳ ಬೆಳವಣಿಗೆಗೆ ಸಂಸ್ಥೆಯೇ ಮೂಲ; ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ;

ವಿದ್ಯಾರ್ಥಿಗಳ ಬೆಳವಣಿಗೆಗೆ ಸಂಸ್ಥೆಯೇ ಮೂಲ; ಶ್ರೀ…

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಮತ್ತುಸಂಶೋಧನಾ ಕೇಂದ್ರದ ಕಟ್ಟಡದ…