News & Updates

ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರಕ್ಕೆ ಚಾಲನೆ;

ಪುತ್ತೂರು ಜುಲೈ.31: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಉದ್ಯೋಗ
ಪಡೆಯಲು ಪಠ್ಯ ಜ್ಞಾನ ಒಂದೇ ಮುಖ್ಯವಲ್ಲ. ಬದಲಾಗಿ ವಿದ್ಯಾರ್ಥಿಗಳು ತಮ್ಮ
ಆಸಕ್ತಿಯ ಕ್ಷೇತ್ರಗಳಲ್ಲಿ ವಿಶೇಷ ಕೌಶಲ್ಯಗಳನ್ನು ಬೆಳೆಸಿಕೊಂಡರೆ
ಉತ್ತಮ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ
ಪೋಷಿಸಲು ಕೌಸಲ್ಯಾಭಿರ್ವದ್ಧಿ ಕಾರ್ಯಕ್ರಮಗಳು, ಸಂಪನ್ಮೂಲ ವ್ಯಕ್ತಿಗಳ
ಮಾರ್ಗದರ್ಶನ ಅಗತ್ಯ. ಹಾಗಾಗಿ ಇಂತಹ ಕಾರ್ಯಕ್ರಮಗಳ
ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಿಸಿಕೊಂಡು ಭಾಗವಹಿಸಬೇಕು
ಎಂದು ಪುತ್ತೂರಿನ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಂಶುಪಾಲ
ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು ಇಲ್ಲಿನ ಟ್ರೈನಿಂಗ್ ಆ್ಯಂಡ್ ಪ್ಲೇಸ್‌ಮೆಂಟ್ ಹಾಗೂ ಐಕ್ಯೂಎಸಿ ಘಟಕದ
ಸಹಯೋಗದಲ್ಲಿ ಮುಂಬೈನ ಎಂ.ಆರ್.ಪೈ ಫೌಂಡೇಶನ್ ಮತ್ತು ಫೋರಂ ಆಫ್
ಫ್ರೀ ಎಂಟರ್‌ಪ್ರೈಸ್ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎರಡು ದಿನದ ನಾಯಕತ್ವ
ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮುಂಬೈನ ಎಂಪವರ್‌ಗ್ರಾಫ್‌ನ
ಸAಸ್ಥಾಪಕಿ ಹಾಗೂ ಜೀವನ ಮತ್ತು ಉದ್ಯಮಶೀಲತೆಯ ತರಬೇತುದಾರರಾದ
ಕ್ಲಾರಿಸ್ಸಾ ಜಥನ್ನಾ ಮತ್ತು ಮುಂಬೈನ ಕಾರ್ಪೊರೇಟ್ ವೃತ್ತಿಪರ
ತರಬೇತುದಾರರಾದ ಸುಧೀರ್ ಪೈ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ನಾಯಕತ್ವ,
ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗ ಕೌಶಲ್ಯಗಳ ಕುರಿತು ಸಂವಾದ ನಡೆಸಿದರು.
ಸ್ನಾತಕೋತ್ತರ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ
ಸ್ವಾಗತಿಸಿ, ಟ್ರೈನಿಂಗ್ ಆ್ಯಂಡ್ ಪ್ಲೇಸ್‌ಮೆಂಟ್ ಘಟಕದ ಸಂಯೋಜಕಿ, ವ್ಯವಹಾರ ಆಡಳಿತ
ವಿಭಾಗದ ಉಪನ್ಯಾಸಕಿ ದೀಪಿಕಾ ವಂದಿಸಿ, ಆಂಗ್ಲ ವಿಭಾಗದ ಉಪನ್ಯಾಸಕಿ ಡಾ. ನಿಶಿತಾ
ಕಾರ್ಯಕ್ರಮ ನಿರೂಪಿಸಿದರು.

Related News

ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರಕ್ಕೆ ಚಾಲನೆ;

ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರಕ್ಕೆ…

ಪುತ್ತೂರು ಜುಲೈ.31: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ…

ವಿವೇಕಾನಂದ ಪದವಿ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ;31-8-2026;

ವಿವೇಕಾನಂದ ಪದವಿ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ;31-8-2026;

ಪುತ್ತೂರು ಜು.31: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ…

ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ಮಾಡುವುದುಪ್ರತಿಯೊಬ್ಬ ಪ್ರಜೆಯ ಕರ್ತವ್ಯ : ಮುರಳಿಕೃಷ್ಣ ಕೆ. ಎನ್;

ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ಮಾಡುವುದುಪ್ರತಿಯೊಬ್ಬ ಪ್ರಜೆಯ…

ಪುತ್ತೂರು, ಜು.೨೮: ಭಾರತದಲ್ಲಿರುವಂತಹ ಉತ್ತಮ ಮತದಾನ ವ್ಯವಸ್ಥೆವಿಶ್ವದಲ್ಲೇ…