News & Updates

ಮಂಗಳೂರು ವಿ.ವಿ ಮಹಿಳೆಯರ ಕಬಡ್ಡಿವಿವೇಕಾನಂದ ಕಾಲೇಜಿನ ಉತ್ತಮ ಸಾಧನೆ.

ಪುತ್ತೂರು: ಕಳೆದ ಸೆಪ್ಟೆಂಬರ್ 29 ಮತ್ತು 30 ರಂದು ಉಜಿರೆಯ ಎಸ್. ಡಿ. ಎಂ,
ಕಾಲೇಜಿನಲ್ಲಿ ಜರಗಿದ 2026 – 27 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ
ಅಂತರ್ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ನಾಲ್ಕನೇ ಸ್ಥಾನವನ್ನು
ಗಳಿಸುವ ಮೂಲಕ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ)
ಮಹಾವಿದ್ಯಾಲಯದ ಕ್ರೀಡಾ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡಿದ್ದಾರೆ.


ಸುಮಾರು 30 ಕಾಲೇಜುಗಳು ಭಾಗವಹಿಸಿದಂತಹ ಈ ಪಂದ್ಯಾಟದ ಪೂರ್ವಭಾವಿಯಾಗಿ
ನಡೆದಂತಹ ಪ್ರಿಲಿಮಿನರಿ ಹಂತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನ
ಪಡೆದುಕೊಂಡಿದ್ದಾರೆ. ಕು ತೃಶಾ.- ದ್ವಿತೀಯ ಬಿ ಕಾಂ, ಉತ್ತಮ ರೈಡರ್
ಪ್ರಶಸ್ತಿಯನ್ನು ಗಳಿಸಿದ್ದಾರೆ. ತಂಡವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳು,
ಅನ್ನಪೂರ್ಣ ರೈ – ತೃತೀಯ ಬಿಬಿಎ, ಭೂಮಿಕಾ – ತೃತೀಯ ಬಿಎ, ಹೇಮಲತಾ –
ತೃತೀಯ ಬಿಎ, ರಶ್ಮಿತ. ಎನ್ – ತೃತೀಯ ಬಿಸಿಎ, ನಿಕ್ಷಿತ – ದ್ವಿತೀಯ ಬಿಕಾಂ, ಅಮೂಲ್ಯ ಪಿ
ಆರ್ – ದ್ವಿತೀಯ ಬಿಕಾಂ, ವರ್ಷಿತ ಹೆಚ್ ವಿ – ದ್ವಿತೀಯ ಬಿ ಸಿ ಎ , ಆದ್ಯ ಬಿ ಆರ್ – ಪ್ರಥಮ
ಬಿಕಾಂ, ಸೋನಾಲಿ ಎಸ್ಎನ್ – ಪ್ರಥಮ ಬಿಬಿಎ. ಇವರಿಗೆ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ
ಯತೀಶ್ ಕುಮಾರ್ ಹಾಗೂ ಡಾ. ಜ್ಯೋತಿ ಇವರು ತರಬೇತಿ ನೀಡಿದ್ದಾರೆ.


ತಂಡದ ಈ ಸಾಧನೆಯಿಂದಾಗಿ ಕಾಲೇಜು ಮುಂದಿನ ವರ್ಷ ನಡೆಯುವ ಪಂದ್ಯಾಟದಲ್ಲಿ
ನೇರವಾಗಿ ಕ್ವಾರ್ಟರ್ ಫೈನಲ್ ಹಂತದಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಗಳಿಸಿದೆ.
ವಿದ್ಯಾರ್ಥಿನಿಯರ ಈ ವಿಶೇಷ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ,
ಪ್ರಾoಶುಪಾಲರು ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Related News

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಸ್ವಾದಸಂಭ್ರಮ-2026’ ಆಹಾರ ಮೇಳ;

ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಸ್ವಾದಸಂಭ್ರಮ-2026’ ಆಹಾರ…

ಪುತ್ತೂರು: ಆಹಾರ ಮೇಳ ಕೇವಲ ಆಹಾರ ಮಾರಾಟದ…

ವಿವೇಕಾನಂದ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳು ಸ್ಪೆಷಲ್ ನ್ಯಾಷನಲ್ಇಂಟಿಗ್ರೇಷನ್ ಕ್ಯಾಂಪ್‌ಗೆ ಆಯ್ಕೆ;

ವಿವೇಕಾನಂದ ಕಾಲೇಜಿನ ಎನ್ ಸಿ ಸಿ…

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ…

ಮಂಗಳೂರು ವಿ.ವಿ ಮಹಿಳೆಯರ ಕಬಡ್ಡಿವಿವೇಕಾನಂದ ಕಾಲೇಜಿನ ಉತ್ತಮ ಸಾಧನೆ.

ಮಂಗಳೂರು ವಿ.ವಿ ಮಹಿಳೆಯರ ಕಬಡ್ಡಿವಿವೇಕಾನಂದ ಕಾಲೇಜಿನ…

ಪುತ್ತೂರು: ಕಳೆದ ಸೆಪ್ಟೆಂಬರ್ 29 ಮತ್ತು 30…