News & Updates

ವಿವೇಕಾನಂದ ಕಾಲೇಜಿನಲ್ಲಿ 2026-27ವಿದ್ಯಾರ್ಥಿ ಸಂಘ ರಚನೆ;

ಪುತ್ತೂರು ಜುಲೈ ೨೫: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ
(ಸ್ವಾಯತ್ತ) ಕಾಲೇಜು ಇದರ ೨೦೨೬-೨೭ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ
ಸಂಘದ ಚುನಾವಣೆ ನಡೆಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ತೃತೀಯ ಬಿ.ಕಾಂ ವಿಭಾಗದ ಪ್ರಣಮ್ ಹಾಗೂ
ಕಾರ್ಯದರ್ಶಿಯಾಗಿ ತೃತೀಯ ಬಿಸಿಎ ವಿಭಾಗದ ಶ್ರೇಯಸ್.ಕೆ.ಆರ್ ಮತ್ತು
ಜತೆ ಕಾರ್ಯದರ್ಶಿಯಾಗಿ ತೃತೀಯ ಬಿಎಸ್ಸಿ ವಿಭಾಗದ ಎ.ವಿದ್ಯಾಲಕ್ಷ್ಮೀ
ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್
ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಚುನಾವಣೆಯ ಕಾರ್ಯವನ್ನು
ಕಾಲೇಜಿನ ಚುನಾವಣಾ ಅಧಿಕಾರಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮತ್ತು
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಮತ್ತು ಕನ್ನಡ
ವಿಭಾಗ ಮುಖ್ಯಸ್ಥ ಹಾಗು ವಿಶೇಷ ಅಧಿಕಾರಿ ಡಾ.ಮನಮೋಹನ ಎಂ,
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ವಿಶೇಷ ಅಧಿಕಾರಿ (ಶಿಕ್ಷಕರ
ಅಭಿವೃದ್ಧಿ) ಡಾ.ವಿದ್ಯಾ ಎಸ್ ಮತ್ತು ಕಾಲೇಜಿನ ಚುನಾವಣಾ ಆಯೋಗದ
ಸದಸ್ಯರು ನಿರ್ವಹಿಸಿದರು.

Related News

ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರಕ್ಕೆ ಚಾಲನೆ;

ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರಕ್ಕೆ…

ಪುತ್ತೂರು ಜುಲೈ.31: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ…

ವಿವೇಕಾನಂದ ಪದವಿ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ;31-8-2026;

ವಿವೇಕಾನಂದ ಪದವಿ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ;31-8-2026;

ಪುತ್ತೂರು ಜು.31: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ…

ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ಮಾಡುವುದುಪ್ರತಿಯೊಬ್ಬ ಪ್ರಜೆಯ ಕರ್ತವ್ಯ : ಮುರಳಿಕೃಷ್ಣ ಕೆ. ಎನ್;

ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ಮಾಡುವುದುಪ್ರತಿಯೊಬ್ಬ ಪ್ರಜೆಯ…

ಪುತ್ತೂರು, ಜು.೨೮: ಭಾರತದಲ್ಲಿರುವಂತಹ ಉತ್ತಮ ಮತದಾನ ವ್ಯವಸ್ಥೆವಿಶ್ವದಲ್ಲೇ…