News & Updates

ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ 2026;

ಸಂಭ್ರಮ ಕನ್ನಡ ಭಾಷೆಯು ಕೇವಲ ನುಡಿಯಾಗದೆ, ಮನದ ಭಾವನೆಯಾಗಬೇಕು: ಡಾ. ಪ್ರಜ್ಞಾ ಮಾರ್ಪಳ್ಳಿ;

ಪುತ್ತೂರು: ಕನ್ನಡವೆಂಬುದು ಕೇವಲ ಸಂವಹನದ

ಮಾಧ್ಯಮವಲ್ಲ, ಅದು ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ ಹಾಗೂ

ಭಾವನೆಗಳ ಪ್ರತಿಬಿಂಬ. ಭಾಷೆಯ ಪ್ರಾಚೀನತೆ, ಸಾಹಿತ್ಯಿಕ

ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು

ಅರಿಯುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದು ಉಡುಪಿ

ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಕನ್ನಡ ವಿಭಾಗದ

ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ

ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇಲ್ಲಿನ ಕನ್ನಡ

ವಿಭಾಗ, ಕನ್ನಡ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ

‘ಕಸ್ತೂರಿ ಕನ್ನಡ’ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ

ವ್ಯಕ್ತಿಯಾಗಿ ಮಾತನಾಡಿದರು.

ಅಶೋಕನ ಶಾಸನಗಳು ಕನ್ನಡ ಭಾಷೆಯ ಪ್ರಾಚೀನತೆಗೆ

ಸಾಕ್ಷಿಯಾಗಿದ್ದು, ಇಂತಹ ಐತಿಹಾಸಿಕ ಹಾಗೂ ಸಾಂಸ್ಕೃತಿಕ

ಸoಗತಿಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ

ತಿಳಿದುಕೊಳ್ಳಬೇಕು. ಕನ್ನಡ ನಾಡು ಮತ್ತು ನುಡಿಯ

ಶ್ರೀಮಂತಿಕೆಯನ್ನು ಅರಿತುಕೊಳ್ಳುವುದರ ಜೊತೆಗೆ

ಕನ್ನಡವನ್ನು ಕೇವಲ ಭಾಷೆಯಾಗಿ ಪರಿಗಣಿಸದೆ, ಮನಸ್ಸಿನಿಂದ

ಮೂಡುವ ಭಾವನೆಯಾಗಿ ಸ್ವೀಕರಿಸಬೇಕು ಎಂದು ಅವರು

ಅಭಿಪ್ರಾಯಪಟ್ಟರು. ಸಾಹಿತ್ಯವು ಶ್ರೀಮಂತವಾಗಿ ಬೆಳೆದುಬಂದ

ಬಗೆಯನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ

ಮಂಡಳಿಯ ಅಧ್ಯಕ್ಷ ಪ್ರೊ. ವರದರಾಜ ಚಂದ್ರಗಿರಿ ಮಾತನಾಡಿ,

ಕರ್ನಾಟಕದ ಬಾವುಟದಲ್ಲಿನ ಎರಡು ಬಣ್ಣಗಳು ಕನ್ನಡದ ಸಂಸ್ಕೃತಿ

ಮತ್ತು ಪರಂಪರೆಯ ಪ್ರತೀಕಗಳಾಗಿವೆ. ಕನ್ನಡ ನಾಡಿನ

ಉದಯದಲ್ಲಿ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು, ಕನ್ನಡ

ನಾಡಿನ ಬಗೆಗಿನ ಅಭಿಮಾನ ಮತ್ತು ಒಲವು ಪ್ರತಿಯೊಬ್ಬರ

ಮನದಲ್ಲೂ ಮೂಡಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್

ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.

ಮನಮೋಹನ ಹಾಗೂ ಕನ್ನಡ ಸಂಘದ ಸಂಯೋಜಕಿ ಡಾ. ಗೀತಾ

ಕುಮಾರಿ. ಟಿ. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕನ್ನಡ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ

ಸ್ವಸ್ತಿಕ್ ಸ್ವಾಗತಿಸಿ, ಕನ್ನಡ ಸಂಘದ ಅಧ್ಯಕ್ಷ ಚಂದನ್ ವಂದಿಸಿ,

ಚೈತನ್ಯ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ 2026;

ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ 2026;

ಸಂಭ್ರಮ ಕನ್ನಡ ಭಾಷೆಯು ಕೇವಲ ನುಡಿಯಾಗದೆ, ಮನದ…

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಂದ ಪೀಲ್ಡ್ ವಿಸಿಟ್ಬಿಬಿಎ ಲಾಜಿಸ್ಟಿಕ್ಸ್ ವಿದ್ಯಾರ್ಥಿಗಳಿಂದ ಬಂದರು, ಲಾಜಿಸ್ಟಿಕ್ಸ್ ಸಂಸ್ಥೆ ಹಾಗೂರೈಲ್ವೆ ಸರಕು ಯಾರ್ಡ್ಗೆ ಅಧ್ಯಯನ ಭೇಟಿ;

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಂದ ಪೀಲ್ಡ್ ವಿಸಿಟ್ಬಿಬಿಎ…

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು…

ವಿವೇಕಾನಂದ ಕಾಲೇಜಿನಲ್ಲಿ ‘ಪ್ರಕರ್ಷನ್’ಕೌಶಲ್ಯಾಭಿವೃದ್ಧಿ ಕಾರ್ಯಾಗಾರ;

ವಿವೇಕಾನಂದ ಕಾಲೇಜಿನಲ್ಲಿ ‘ಪ್ರಕರ್ಷನ್’ಕೌಶಲ್ಯಾಭಿವೃದ್ಧಿ ಕಾರ್ಯಾಗಾರ;

ಪುತ್ತೂರು: ಕಲಿಯುವ ಇಚ್ಛೆ ಮತ್ತು ಅಭ್ಯಾಸದ ಮನೋಭಾವದಿಂದಅಭಿವೃದ್ಧಿ…