
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ
(ಸ್ವಾಯತ್ತ) ಇಲ್ಲಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಬಿಬಿಎ ಲಾಜಿಸ್ಟಿಕ್ಸ್ ವಿದ್ಯಾರ್ಥಿಗಳಿಗೆ
ಮಂಗಳೂರಿನ ನವ ಮಂಗಳೂರು ಬಂದರು ಪ್ರಾಧಿಕಾರ ಹಾಗೂ ಪಣಂಬೂರಿನ ರೈಲ್ವೆ ಸರಕು ಯಾರ್ಡ್ಗೆ ಅಧ್ಯಯನ ಭೇಟಿಯನ್ನು ಆಯೋಜಿಸಲಾಯಿತು.
ವಿದ್ಯಾರ್ಥಿಗಳಿಗೆ ಸರಕು ಸಾಗಣೆ, ಸರಕುಗಳ ಲೋಡಿಂಗ್ ಮತ್ತು ಅನ್ಲೋಡಿಂಗ್,
ಗೋದಾಮು ನಿರ್ವಹಣೆ, ಸರಕುಗಳ ಸಂಗ್ರಹಣೆ, ಪ್ಯಾಕಿಂಗ್, ಸಾಗಣೆ ಪ್ರಕ್ರಿಯೆ
ಹಾಗೂ ರಸ್ತೆ ಮತ್ತು ರೈಲ್ವೆ ಸಾರಿಗೆಯ ಕಾರ್ಯವಿಧಾನಗಳ ಕುರಿತು
ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ದೃಷ್ಟಿಯಿಂದ ಈ ಅಧ್ಯಯನ ಭೇಟಿಯನ್ನು
ಆಯೋಜಿಸಲಾಯಿತು.
ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಬಂದರಿನ ಕಾರ್ಯನಿರ್ವಹಣೆ, ಆಮದು
ಮತ್ತು ರಫ್ತು ಸರಕುಗಳ ನಿರ್ವಹಣೆ ಹಾಗೂ ಹಡಗುಗಳ ಮೂಲಕ
ನಡೆಯುವ ಸರಕು ಸಾಗಣೆಯ ಕುರಿತು ವಿದ್ಯಾರ್ಥಿಗಳು ಮಾಹಿತಿ ಪಡೆದರು.
ಭೇಟಿಯ ಸಂದರ್ಭದಲ್ಲಿ ರಸ್ತೆ ಸಾರಿಗೆ, ಲಾಜಿಸ್ಟಿಕ್ಸ್ ಕಾರ್ಯಾಚರಣೆ
ಮತ್ತು ಸರಕು ವಿತರಣಾ ವ್ಯವಸ್ಥೆಯ ಕುರಿತು ತಿಳಿದುಕೊಂಡರು. ಪಣಂಬೂರು
ರೈಲ್ವೆ ಸರಕು ಯಾರ್ಡ್ನಲ್ಲಿ ರೈಲಿನ ಮೂಲಕ ಸರಕುಗಳ ಸಾಗಣೆ, ಲೋಡಿಂಗ್
ಮತ್ತು ಅನ್ಲೋಡಿಂಗ್ ಪ್ರಕ್ರಿಯೆಗಳನ್ನು ವೀಕ್ಷಿಸಿ ರೈಲ್ವೆ ಸಾರಿಗೆಯ
ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
